ಮಂಗಳೂರು: ಗೌರಿತಾಳಿಗೆ ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ ಯೋಗ ಪಟು ಗೌರಿತಳಿಗೆ ರಾಷ್ಟ್ರ ಮಟ್ಟದ ಯೋಗ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ 23ರಂದು ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರಿನ ಅಕ್ಕಮಹಾದೇವಿ ಸಭಾಭವನದಲ್ಲಿ ನಡೆಯಿತು.
ಬೆಳಕು ಸಾಹಿತ್ಯಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಆಯೋಜಿಸಿದ 117ನೇ ಕಾರ್ಯ ಕ್ರಮ ರಾಷ್ಟ್ರ ಮಟ್ಟದ ಬೆಳಕು ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯ ಕ್ರಮ ದಲ್ಲಿ ಶ್ರೀಮತಿ ಗೌರಿಶಂಕರ ಶೆಟ್ಟಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕಿ, ಶ್ರೀಮತಿ ಮಾಲತಿ ಗೌಡ ಚಲನಚಿತ್ರ ನಿರ್ಮಾಪಕರು,ಡಾ.ನಿರ್ಮಲ ಸಾಹಿತಿಗಳು, ಶ್ರೀ ಅಣ್ಣಪ್ಪ ಮೇಟ ಗೌಡ ಸಂಸ್ಥಾಪಕ ಅಧ್ಯಕ್ಷರು ,ಸಮಾಜ ಸೇವಕರು ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯ ಕ್ರಮದಲ್ಲಿ ಗೌರಿತಾ ಕೆ ಜಿ ಯೋಗ ನೃತ್ಯ ಪ್ರದರ್ಶನ ನೀಡಿದರು. ಕುಮಾರಸ್ವಾಮಿ ವಿದ್ಯಾಲಯದಲ್ಲಿ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವಳು ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ರವರ ಪುತ್ರಿ .