ಕೊಹ್ಲಿ ಫಾರ್ಮ್ ಕುರಿತ ಟೀಕೆಗಳಿಗೆ ನಾಯಕ ರೋಹಿತ್‌ ಶರ್ಮಾ 'ಭರವಸೆ'ಯ ಉತ್ತರ


ಪ್ರೊವಿಡೆನ್ಸ್ ; ಬ್ಯಾಟಿಂಗ್‌ ಲಯ ಕಳೆದು ಕೊಂಡಿರುವ ವಿರಾಟ್‌ ಕೊಹ್ಲಿ ಫೈನಲ್‌ನಲ್ಲಿ ಆಡ್ತಾರೆ ಬಿಡಿ ಎಂದು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ತಾಳೆ ಕಳೆದುಕೊಂಡು ಕೇವಲ 9 ರನ್‌ಗೆ ಕೊಹ್ಲಿ ಔಟಾದ ಬಗ್ಗೆ ಕೆಲ ಟೀಕೆಗಳು ಬಂದ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ಭರವಸೆಯ ಮಾತುಗಳನ್ನಾಡಿದ್ದಾರೆ.ಇಡೀ ಟಿ-20 ವಿಶ್ವಕಪ್‌ನಲ್ಲಿ ಕೊಹ್ಲಿ ಹೇಳಿಕೊಳ್ಳುವಂತಹ ರನ್‌ ಗಳಿಸಿಲ್ಲ. ಇವರ ಬದಲಾಗಿ ಆರಂಭಿಕ ಸ್ಫೋಟಕ ಆಟಗಾರ ಮತ್ತು ಯುವ ಬ್ಯಾಟ್ಸ್ ಮನ್‌ ಜೈಸ್ವಾಲ್‌ ಅವರನ್ನು ಕಣಕ್ಕಿಳಿಸಬಹುದು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದಾರೆ.

ಇದಕ್ಕೆ ಸಮಜಾಯಿಷಿ ಎಂಬಂತೆ ರೋಹಿತ್‌ ಶರ್ಮಾ ಕೊಹ್ಲಿ ಪರವಾಗಿ ನಿಂತು ಮುಂದಿನ ಮಹತ್ವದ ಫೈನಲ್‌ ಪಂದ್ಯದಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಬಿಡಿ, ಅವರು ಆಡುವುದು ಖಚಿತ ಎಂದು ಹೇಳಿದ್ದಾರೆ.

10 ವರ್ಷಗಳ ಬಳಿಕ ನಾವು ಟಿ-20 ವಿಶ್ವಕಪ್‌ ಫೈನಲ್‌ಗೆ ಬಂದಿದ್ದೇವೆ. ಇದು ನನಗೆ ದೊಡ್ಡ ಸಂಭ್ರಮದ ಕ್ಷಣ. ಆದರೆ, ಫೈನಲ್‌ನಲ್ಲಿ ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿದರೆ ನನಗೆ ಮತ್ತಷ್ಟು ಖುಷಿ ತರಲಿದೆ ಎಂದು ಹೇಳಿದರು.

ಏರ್‌ಟೆಲ್‌‍ ಗ್ರಾಹಕರಿಗೆ ಶಾಕ್..!

ಡ್ರೆಸ್ಸಿಂಗ್‌ ರೂಮ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಭರ್ಜರಿ ಗೆಲುವಿನ ನಂತರ ಭಾವುಕರಾಗಿದ್ದ ರೋಹಿತ್‌ ಶರ್ಮಾಗೆ ಸ್ವತಃ ವಿರಾಟ್‌ ಕೊಹ್ಲಿಯೇ ಸಮಾಧಾನ ಮಾಡಿ ಅವರಿಗೆ ನಗು ತರಿಸಿದ ದೃಶ್ಯ ಕಂಡುಬಂತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.