ಮಂಗಳೂರು: ಸಮಸ್ತ 99 ನೇ ವಾರ್ಷಿಕೋತ್ಸವ ಇದರ ಪ್ರಯುಕ್ತ ಧ್ವಜಾರೋಹಣ ಹಾಗೂ ಮದ್ರಸ ವಿದ್ಯಾರ್ಥಿಗಳ ಸಾಹಿತ್ಯ ಕಾರ್ಯಕ್ರಮ ಬಹುಮಾನ ವಿತರಣೆ. ವಿಜೃಂಭಣೆ ಯಿಂದ ನಡೆಸಲಾಯಿತು.
ಬದ್ರಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾದ ನಿಸಾರ್ ಅಹ್ಮದ್ ಧ್ವಜಾರೋಹಣ ನೆರವೇರಿಸಿ ಮಸೀದಿಯ ಖತೀಬರಾದ ಝೈನುದ್ದೀನ್ ಯಮಾನಿ ಉಸ್ತಾದರೂ ದುಹಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಸೀದಿಯ ಮುಹಲ್ಲಿಂ ಪಿ.ಕೆ ಇಬ್ರಾಹಿಂ ಉಸ್ತಾದ್,ಉಮರ್ ಫಾರೂಕ್ ಉಸ್ತಾದ್ ಹಾಗೂ ಮಸೀದಿಯ ಉಪಧ್ಯಕ್ಷರಾದ ಇಂತಿಯಾಝ್ ಐಡಿಯಲ್, ಕಾರ್ಯದರ್ಶಿ ಶೇಕ್ ಅಬ್ದುಲ್ ಖಾದರ್, ಮಾಜಿ ಕಾರ್ಯದರ್ಶಿ ಆಸಿಫ್ ಕೆ.ಎ , ಸದಸ್ಯರಾದ ಅಬ್ದುಲ್ ಖಾದರ್ ಹಾಗೂ ಇನ್ನಿತರ ಸದಸ್ಯರು ಹಾಗೂ ಜಮಾತ್ ಬಾಂಧವರು ಹಾಗೂ ಮದರಸ ಮಕ್ಕಳು ಉಪಸ್ಥಿತರಿದ್ದರು.