ಬೆಂಗಳೂರು : ಧಿಡೀರನೆ ನಂದಿನಿ ಹಾಲಿನಿ ಬೆಲೆ ಏರಿಸುವ ಮೂಲಕ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಶಾಕ್ ನೀಡಿದ್ದಾರೆ. ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಗೆ 2 ರೂ. ಹಾಗೂ ಒಂದು ಲೀಟರ್ ಹಾಲಿನ ಪ್ಯಾಕೆಟ್ ಮೇಲೆ 1 ರೂ. ದರ ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್ ಹಾಲಿನ ದರವನ್ನ 2.10 ರೂ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ.1050 ಮಿ.ಲೀ ಹಾಲಿಗೆ 50 ಮಿಲೀ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಲೀಟರ್‌ಗೆ 44 ರೂ ಇರುವ ಒಂದು ಲೀ ಹಾಲಿನ ಬೆಲೆಯು ಬುಧವಾರದಿಂದ 46 ರೂ ಆಗಲಿದೆ. ಹಾಗೆಯೇ 22 ರೂ. ದರವಿರುವ 550 ಮಿ.ಲೀ ಪ್ಯಾಕೆಟ್ ಹಾಲು, 24 ರೂ.ಗೆ ಮಾರಾಟವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ.
ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೀಗಿದೆ
ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ
ಕರ್ನಾಟಕ- ನಂದಿನಿ ಹಾಲು- 44
ಕೇರಳ- ಮಿಲ್ಮಾ- 52
ದೆಹಲಿ ಮದರ್ ಡೇರಿ-54
ಗುಜರಾತ್ ಅಮುಲ್- 56
ಮಹಾರಾಷ್ಟ್ರ ಅಮುಲ್- 56
ಆಂಧ್ರ ಪ್ರದೇಶ್ ವಿಜಯ- 58