Suraj Revanna : ಈ ವಿಷಯ ಇಲ್ಲಿಗೇ ಬಿಟ್ಟುಬಿಡು..! ಸೂರಜ್‌ - ಸಂತ್ರಸ್ತ - Call ಆಡಿಯೋ ವೈರಲ್


ಬೆಂಗಳೂರು : ತಮ್ಮ ಪಕ್ಷದ ಕಾರ್ಯಕರ್ತರ ನೋರ್ವನಿಗೆ ಎಂಎಲ್ಸಿ ಸೂರಜ್ ರೇವಣ್ಣ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದು, ಈ ಅಸಹಜ ಲೈಂಗಿಕ ಪ್ರಕರಣ ಸಂಬಂಧ ಸಂತ್ರಸ್ತನೊಂದಿಗೆ ಸೂರಜ್ ರೇವಣ್ಣ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸದ್ಯ ವೈರಲ್ ಆಗುತ್ತಿದೆ.


'ನನಗೆ ಹಿಂಸೆ ಆಗಿದೆ ಮನೆಗೂ ಹೋಗೋಕೆ ಆಗ್ತಿಲ್ಲ. ಎಂದು ಸಂತ್ರಸ್ತ ಆಡಿಯೋದ ಬೇಡಿಕೊಂಡಿದ್ದಾರೆ. ಆದರೆ ಎಲ್ಲಾ ವಿಚಾರಗಳನ್ನು ಫೋನ್ನಲ್ಲಿ ಮಾತನಾಡಲು ಆಗಲು. ನೀನು ಬಂದು ಎದುರಿಗೆ ಭೇಟಿಯಾಗು. ತಲೆ ಕೆಡಿಸಿಕೊಳ್ಳಬೇಡ. ಈಗ ಆ ವಿಷಯ ಏನೇನೋ ಆಗಿ ಹೋಗಿದೆ. ಅದನ್ನು ಕುಳಿತುಕೊಂಡು ಮಾತನಾಡೋಣ ಬಾ ಒಂದುಸಾರಿ' ಎಂದು ಸೂರಜ್ ಸಂತ್ರಸ್ತನಿಗೆ ಹೇಳಿದ್ದಾರೆಂಬಂತೆ ಆಡಿಯೋದಲ್ಲಿ ಸಂಭಾಷಣೆ ಇದೆ.

'ನಾನು ಎದುರಿಗೆ ಬಂದರೆ ನನ್ನನ್ನು ಸುಮ್ಮನೇ ಬಿಟ್ಟುಬಿಡ್ತಾರಾ ಹೇಳಿ ಅಣ್ಣ' ಅಂತಲೂ ಸಂತ್ರಸ್ತ ಯುವಕ ಆಡಿಯೋದಲ್ಲಿ ಭಯದ ಮಾತುಗಳನ್ನು ಹೇಳಿದ್ದಾನೆ. 'ನಿನಗೆ ಒಂಚೂರು ಅಮೌಂಟ್ ಬೇಕಾ ಹೇಳು ಕಳಿಸುತ್ತೇನೆ. ಆ ವಿಚಾರದಿಂದ ತಲೆಕೆಡಿಸಿಕೊಳ್ಳಬೇಡ. ಇಲ್ಲಿಗೆ ಈ ಇಶ್ಯು ಬಿಟ್ಟುಬಿಡು. ಆ ವಿಚಾರ ಯಾರಿಗೂ ಗೊತ್ತಾಗಲ್ಲ. 4-5 ತಿಂಗಳಲ್ಲಿ ನಿನಗೆ ಕೆಲಸವೂ ಕೊಡಿಸುತ್ತೇನೆ' ಎಂದು ಹಣ ಹಾಗೂ ಉದ್ಯೋಗದ ಆಮಿಷವನ್ನು ಸೂರಜ್ ರೇವಣ್ಣ ಸಂತ್ರಸ್ತನಿಗೆ ಒಡ್ಡಿದ್ದಾರೆ. ಈ ಮೂಲಕ ಸಂಧಾನಕ್ಕೆ ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಸದ್ಯ ಈ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ತನಿಖೆಯ ನಂತರವೇ ಆಡಿಯೋ ಕುರಿತಾದ ನಿಜಾಂಶ ಏನೆಂಬುವುದು ತಿಳಿದುಬರಬೇಕಿದೆ.

ಇನ್ನು ಸೂರಜ್ ಪ್ರಕರಣ ಕುರಿತು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಜು.1ರವರೆಗೆ ಸೂರಜ್ ರೇವಣ್ಣಗೆ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.