ಜುಲೈ 8 ರಂದು ದ.ಕ ಜಿಲ್ಲೆಯಲ್ಲಿ ಶಾಲೆಗೆ ರಜೆ ಇಲ್ಲ: ಯಾವುದೇ ಗೊಂದಲಕ್ಕೆ ಒಳಗಾಗಬೇಡಿ| ಜಿಲ್ಲಾಧಿಕಾರಿ ಸ್ಪಷ್ಟನೆ


ಮಂಗಳೂರು: ನಾಳೆ (ಜು.8) ದ.ಕ ಜಿಲ್ಲೆಯಲ್ಲಿ ಶಾಲೆಗೆ ರಜೆ ಇಲ್ಲ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಗೊಂದಲಕ್ಕೆ ಒಳಗಾಗಬೇಡಿ.

ದ.ಕ. ಜಿಲ್ಲೆಯಲ್ಲಿ ರವಿವಾರ ದಿನವಿಡೀ ಉತ್ತಮ ಮಳೆಯಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದ ಬಹುತೇಕ ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ.

ನಾಳೆ‌ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುವ ಸೂಚನೆ ಇದ್ದು, ಹವಾಮಾನ ಇಲಾಖೆಯು ಆರೇಂಜ್ ಅಲರ್ಟ್ ಘೋಷಿಸಿದೆ