ಹುಬ್ಬಳ್ಳಿ: ಆನ್ಲೈನ್ ಗೇಮ್ ವ್ಯಾಮೋಹಕ್ಕೆ ಸಿಲುಕಿ ಯುವಕ ಆತ್ಮಹತ್ಯೆಗೆ ಶರಣು


ಇತ್ತೀಚೆಗೆ ಆನ್ಲೈನ್ ಗೇಮ್ ವ್ಯಾಮೋಹ ಹೆಚ್ಚಾಗಿದೆ. ಆನ್ಲೈನ್ ಗೇಮ್ ವ್ಯಾಮೋಹಕ್ಕೆ ಸಿಲುಕಿ ಅದೆಷ್ಟೋ ಯುವಕ, ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಆನ್ಲೈನ್ ಗೇಮ್ ವ್ಯಾಮೋಹಕ್ಕೆ ಸಿಲುಕಿ, ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹುಬ್ಬಳ್ಳಿ, ಜುಲೈ 10: ಆನ್​ಲೈನ್​ ಗೇಮ್ (Online Game)​ ವ್ಯಾಮೋಹಕ್ಕೆ ಸಿಲುಕಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ (21) ಮೃತ ದರ್ದೈವಿ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ ಬಿವಿಬಿ ಕಾಲೇಜಿನಲ್ಲಿ (BVB College) ಬಿಇ 6ನೇ ಸೆಮಿಸ್ಟರ್​ನಲ್ಲಿ ಓದುತ್ತಿದ್ದನು. ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ನೆಲಸಿದ್ದನು. ರಾಕೇಶ್ ಪ್ರತಿದಿನವೂ ಆನ್​ಲೈನ್​ ಗೇಮ್​ ಆಡುತ್ತಿದ್ದನು. ​ಆನ್​ಲೈನ್ ಗೇಮ್​ನಿಂದ ಹಣ ಕಳೆದುಕೊಂಡಿದ್ದ ರಾಕೇಶ್​ ಮನನೊಂದು ತಾನು ಇದ್ದ ಕೋಣೆಯ ಫ್ಯಾನ್​ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಸತಿ ನಿಲಯಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತ್ತೀಚಿಗೆ ಆನ್ಲೈನ್ ಗೇಮ್ ವ್ಯಾಮೋಹ ಹೆಚ್ಚಾಗಿದೆ. ಆನ್ಲೈನ್ ಗೇಮ್ ವ್ಯಾಮೋಹಕ್ಕೆ ಸಿಲುಕಿ ಅದೆಷ್ಟೋ ಯುವಕ, ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಆನ್ಲೈನ್ ಗೇಮ್ ವ್ಯಾಮೋಹಕ್ಕೆ ಸಿಲುಕಿ, ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.