ಕರ್ನಾಟಕದ ಯೋಧ ಜಮ್ಮು ಕಾಶ್ಮೀರದಲ್ಲಿ ಹುತಾತ್ಮ!


ಜಯಪುರ: ಕರ್ನಾಟಕ ಮೂಲದ ವಿಜಯಪುರದ(Soldier) ಯೋಧ ಜಮ್ಮು-ಕಾಶ್ಮೀರದಲ್ಲಿ (Jammu And Kashmir) ಹುತಾತ್ಮರಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ರೆಜಿಮೆಂಟ್‌ 13ರಲ್ಲಿ ಹವಾಲ್ದಾರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ (Vijayapura) ಜಿಲ್ಲೆಯ ತಿಕೋಟಾದ ಯೋಧ ರಾಜು ಕರ್ಜಗಿ ಹುತಾತ್ಮರಾಗಿದ್ದಾರೆ.ಈ ಕುರಿತು ಕುಟುಂಬಸ್ಥರಿಗೆ ನಿನ್ನೆಯೇ ಕರೆ ಮಬಂದಿದೆ. ಹುತಾತ್ಮ ಆದ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಯಾವ ರೀತಿ ಹುತಾತ್ಮರಾದರು. ಯಾವಾಗ ಮೃತದೇಹ ತರಲಾಗುತ್ತದೆ ಎಂಬ ಕುರಿತು ಮಾತ್ರ ಇದುವರೆಗೆ ಮಾಹಿತಿ ಸಿಕ್ಕಿಲ್ಲ.

ಈ ಸುದ್ದಿ ಕೇಳಿ ಕುಟುಂಬಸ್ಥರು ಕಂಗಾಲಾಗಿದ್ದ, ಕಣ್ಣೀರು ಸುರಿಸುತ್ತಿದ್ದಾರೆ. ಅಲ್ಲದೇ, ಯೋಧನ ಬಗ್ಗೆ ಜಿಲ್ಲಾಡಾಳಿತಕ್ಕೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಯೋಧ ಅಗಲಿಕೆಯಿಂದ ತಿಕೋಟ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ.

 ಹುತಾತ್ಮ ಯೋಧ ರಾಜು ಸಾವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹುತಾತ್ಮ ಯೋಧನ ಅಕಲಿಕೆಯಿಂದ ಭಾರತೀಯ ಸೇನೆಗೆ ತುಂಬಲಾರದ ನಷ್ಟ ಆಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.