BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಹಾಡಹಗಲೇ ತಹಶೀಲ್ದಾರ್ ಕಚೇರಿಯಲ್ಲೇ 'ಶಿರಸ್ತೆದಾರ್'ಗೆ ಚಾಕು ಇರಿತ


ಬೀದರ್: ರಾಜ್ಯದಲ್ಲಿ ಬೆಚ್ಚಿ ಬೀಳುಸುವಂತ ಘಟನೆ ಎಂಬಂತೆ ಹಾಡಹಗಲೇ ತಹಶೀಲ್ದಾರ್ ಕಚೇರಿಯಲ್ಲೇ ಶಿರಸ್ತೆದಾರ್ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹಲ್ಲೆ ನಡೆಸಿ, ಪರಾರಿಯಾಗಿರುವಂತ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್ ನ ತಹಶೀಲ್ದಾರ್ ಕಚೇರಿಯಲ್ಲೇ ಕರ್ತವ್ಯ ನಿರತ ಶಿರಸ್ತೆದಾರ್ ಮೇಲೆ ಹಾಡಹಗಲೇ ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವಂತ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.

ಬೀದರ್​ ತಹಶಿಲ್ದಾರ್​ ಕಚೇರಿಯಲ್ಲಿ ಆಹಾರ ಶಾಖೆಯ ಶಿರಸ್ತೇದಾರ ಆಗಿರುವ ಅನಿಲ್‌ಕುಮಾರ್ ವ್ಯಾಸ್, ಎಂಬುವವರ ಮೇಲೆ ಅಮನ್ ಜುಬೇರ್ ಎಂಬಾತ ಚಾಕು ಇರಿದು ಪರಾರಿಯಾಗಿದ್ದಾನೆ. ಅಮನ್ ಜುಬೇದ್ ಚಾಕುವಿನಿಂದ ಶಿರಸ್ತೆದಾರ್ ಮೇಲೆ ಹಲ್ಲೆ ನಡೆಸೋದಕ್ಕೆ ಕಾರಣ ಏನು ಅಂತ ತಿಳಿದು ಬಂದಿಲ್ಲ.

ಚಾಕು ಇರಿತಕ್ಕೆ ಒಳಗಾದಂತ ಶಿರಸ್ತೆದಾರ್ ಅನಿಲ್ ಕುಮಾರ್ ವ್ಯಾಸ್ ಅವರನ್ನು ಕೂಡಲೇ ಕಚೇರಿಯ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಚಾಕು ಇರಿತದಿಂದ ಅನಿಲ್ ಕುಮಾರ್ ವ್ಯಾಸ ಅವರ ಎಡಗೈ, ಭಜಕ್ಕೆ ಗಂಭೀರ ಗಾಯವಾಗಿದೆ.

ಇದೀಗ ಶಿರಸ್ತೆದಾರ್ ಅನಿಲ್ ಕುಮಾರ್ ವ್ಯಾಸ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬೀದರ್ ನ ಮಾರ್ಕೆಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಕುವಿನಿಂದ ಶಿರಸ್ತೆದಾರ್ ಅವರನ್ನು ಇರಿದಂತ ಅಮನ್ ಜುಬೇರ್ ಎಂಬಾತನ ಬಂಧನಕ್ಕೆ ಬಲೆ ಬೀಸಿದ್ದಾರೆ.