Karnataka Rains: ಮುಂದಿನ 48ಗಂಟೆ ಈ ಜಿಲ್ಲೆಗಳಿಗೆ 200ಮಿಮಿ.ಗೂ ಅಧಿಕ ಭಾರೀ ಮಳೆ, 'ರೆಡ್ ಅಲರ್ಟ್'


ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವೈಪರಿತ್ಯಗಳ ಏರಿಳಿತ ಮುಂದುವರಿದಿದೆ. ಇದರ ಪರಿಣಾಮವಾಗಿ ಮುಂಗಾರು ಮಳೆ ಆರ್ಭಟ ಸಹ ಮುಂದುವರಿಯುತ್ತಿದೆ. ಇದೀಗ ಮತ್ತೆ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ಇದ್ದ ವಿವಿಧ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ.ಎರಡು ವಾರದಿಂದ ಹಿಂದೆ ನಿರಂತರವಾಗಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಲಾಗಿತ್ತು. ಅಂದಿನಂತೆ ಇಂದು ಸಹ ವಾತಾವರಣದಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಈ ಕಾರಣದಿಂದಾಗಿ ಮುಂದಿನ 48 ಗಂಟೆಗಳ ಕಾಲ 200 ಮೀಟರ್‌ಗೂ ಹೆಚ್ಚು ಮಳೆ ಸಂಭವವಿದೆ.

ಹವಾಮಾನ ಬದಲಾವಣೆಯ ಪ್ರಭಾವ

ಸದ್ಯ ಕರ್ನಾಟಕ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಸ್ಟ್ರಫ್-ಸುಳಿಗಾಳಿಯು ಮಹಾರಾಷ್ಟ್ರ, ಗುಜರಾತ್ ಕರಾವಳಿ ವರೆಗೂ ಪ್ರಭಾವ ಬೀರಿದೆ. ಇದರ ಪರಿಣಾಮವಾಗಿ ಮುಂದಿನ ಎರಡು ದಿನಗಳ ಕಾಲ ಜೋರು ಕರ್ನಾಟಕದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ಮಳೆ: 4 ದಿನ ಕರಾವಳಿ, ಮಲೆನಾಡಿಗೆ ಭಾರೀ ಮಳೆ, 'ಆರೆಂಜ್‌ ಅಲರ್ಟ್' ಘೋಷಣೆ: IMD ಮುನ್ಸೂಚನೆ

ಇನ್ನೂ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು (ಜುಲೈ 7ರವರೆಗೆ) ಅತ್ಯಧಿಕ ಮಳೆ ಬರುವ ಪ್ರಯುಕ್ತ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಜುಲೈ 7ರ ನಂತರ ಕರಾವಳಿಯ ಮೂರು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಮೂರು ದಿನ 'ಯೆಲ್ಲೋ ಅಲರ್ಟ್'‌ ಕೊಡಲಾಗಿದೆ ಎಂದು ಶುಕ್ರವಾರದ ಐಎಂಡಿ ಮುನ್ಸೂಚನೆ ತಿಳಿಸಿದೆ.

ಒಳನಾಡು ಜಿಲ್ಲೆಗಳಿಗೆ ಸಾಮಾನ್ಯ ಮಳೆ

ಇನ್ನೂ ಇದೇ ವೇಳೆ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಕೋಲಾರ, ರಾಮನಗರ, ಹಾಸನ, ಕೊಡಗು, ತುಮಕೂರು, ದಾವಣಗೆರೆ, ಬಳ್ಳಾರಿ ಹಾಗೂ ಇನ್ನಿತರ ಕಡೆಗಳಲ್ಲಿ ಆಗಾಗ ಹಗುರದಿಂದ ಸಾಧಾರಣವಾಗಿ ಮಳೆ ಬರುವ ಮುನ್ಸೂಚನೆ ನೀಡಲಾಗಿದೆ.

ಇನ್ನೂ ಉತ್ತರ ಕರ್ನಾಟಕದಲ್ಲಿ ಕೆಲವು ಕಡೆಗಳಲ್ಲಿ ಮಾತ್ರವೇ ಮಳೆ ಆಗುತ್ತಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆಯಲ್ಲಿ ಸಾಮಾನ್ಯ ಮಳೆ ಕಂಡು ಬಂದಿದೆ. ಹಾವೇರಿ, ಗದಗ, ಕೊಪ್ಪಳದಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯ ಸದ್ಯಕ್ಕೆ ಮಳೆ ಕೊರತೆ ಕಂಡು ಬಂದಿದೆ.