ಹೊಸದಿಲ್ಲಿ: ದಿಲ್ಲಿಯಲ್ಲಿ ಟೊಮೇಟೊ ಬೆಲೆ ಪ್ರತೀ ಕೆ.ಜಿ.ಗೆ 70ರಿಂದ 80ರೂ. ಏರಿಕೆ ಯಾಗಿದೆ. ಇತ್ತೀಚೆಗೆ ದೇಶದಲ್ಲಿ ಉಂಟಾದ ಉಷ್ಣ ಮಾರುತ ಟೊಮೇಟೊ ಉತ್ಪಾದನೆಮೇಲೆ ಪರಿಣಾಮ ಬೀರಿದೆ.
ಇದರಿಂದ ಮಾರುಕಟ್ಟೆಗೆ ಟೊಮೇಟೊ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಆನ್ಲೈನ್ ಮಾರುಕಟ್ಟೆ ಗಳಲ್ಲಿ 80ರೂ., ಸಫಲ್ ಸ್ಟೋರ್ಗಳಲ್ಲಿ 75ರೂ., ಸ್ಥಳೀಯ ಮಾರುಕಟ್ಟೆಗಳಲ್ಲಿ 70ರಿಂದ 80ರೂ.ವರೆಗೆ ಟೊಮೇಟೊ ಮಾರಾಟವಾಗುತ್ತಿದೆ.
ಆಲುಗಡ್ಡೆ ಹಾಗೂ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 35ರಿಂದ 43ರೂ.ಗೆ ಏರಿಕೆಯಾಗಿದೆ.