T20 World Cup: ಸೂರ್ಯಕುಮಾರ್ ಯಾದವ್ ಕ್ಯಾಚ್ ಎಡವಟ್ಟು, ಭಾರತ ಗೆದ್ದ ವಿಶ್ವಕಪ್ ವಾಪಸ್?


 ಸೂರ್ಯಕುಮಾರ್ ಯಾದವ್ ಈಗ ಜಗತ್ತಿನಾದ್ಯಂತ ಚರ್ಚೆಯಲ್ಲಿದ್ದಾರೆ. ಯಾಕಂದ್ರೆ ಭಾರತ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆದ್ದಿದೆ, ಇದಕ್ಕೆ ಕಾರಣ ಒಂದು ಲೆಕ್ಕದಲ್ಲಿ ಭಾರತದ ಬೆಸ್ಟ್ ಬ್ಯಾಟ್ಸ್‌ಮನ್ ಕಂ ಫೀಲ್ಡರ್ ಸೂರ್ಯಕುಮಾರ್ ಯಾದವ್ ಅಂತಿದ್ದಾರೆ ಅಭಿಮಾನಿಗಳು.ಹೀಗಿದ್ದಾಗ ಇದೇ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೌಂಡರಿ ಲೈನ್ ಬಳಿ ಹಿಡಿದ ಕ್ಯಾಚ್ ದೊಡ್ಡ ಗಂಡಾಂತರ ತಂದೊಡ್ಡಿದೆ. ಹಾಗಾದ್ರೆ ಭಾರತ ಈಗ ಗೆದ್ದಿರುವ 'ಟಿ20 ವಿಶ್ವಕಪ್' ವಾಪಸ್ ಕೊಡಬೇಕಾ? ಮುಂದೆ ಓದಿ.

ಹೌದು, ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯ ಗೆದ್ದು ಬೀಗಿ ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. 2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದ್ದ ಭಾರತಕ್ಕೆ 2024 ರಲ್ಲಿ ಮತ್ತೊಮ್ಮೆ ವಿಜಯಲಕ್ಷ್ಮೀ ಒಲಿದು ಬಂದಿದ್ದು ಸಾರ್ಥಕ ಕ್ಷಣಕ್ಕೂ ಸಾಕ್ಷಿ ಆಗಿತ್ತು. ಅದರಲ್ಲೂ ಮ್ಯಾಚ್ ಇನ್ನೇನು ಕೈಬಿಟ್ಟು ಹೋಗುತ್ತಿದೆ ಎನ್ನುವಾಗಲೇ ಭಾರತಕ್ಕೆ ಆಸರೆಯಾಗಿ ನಿಂತಿದ್ದು ಸೂರ್ಯಕುಮಾರ್ ಯಾದವ್ ಅವರು ಬೌಂಡರಿ ಲೈನ್ ಬಳಿ ಹಿಡಿದ ಅದೊಂದು ಕ್ಯಾಚ್, ಆದರೆ ಈಗ ಅದೇ ಕ್ಯಾಚ್ ಗಂಡಾಂತರ ತಂದಿದೆ!

ಸೂರ್ಯಕುಮಾರ್ ಯಾದವ್ ಎಡವಟ್ಟು?

ದಕ್ಷಿಣ ಆಫ್ರಿಕಾ ಟೀಂ ವಿರುದ್ಧ ಭಾರತ ತಂಡ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ಇನ್ನೇನು ಕೊನೆಯ ಓವರ್ ಹಾಕುವಾಗ 16 ರನ್ ಮಾತ್ರ ಬೇಕಿತ್ತು. ಆಗಲೇ ಸಿಕ್ಸ್ ಹೋಗುತ್ತಿದ್ದ ಬಾಲ್‌ನ ತಡೆದು ಇದೇ ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ ಸಮೀಪ ಎಗರಿ, ಕ್ಯಾಚ್ ಹಿಡಿದು ನೆರವಾಗಿ ನಿಂತರು.

ಹಾರ್ದಿಕ್ ಪಾಂಡ್ಯ ಬೌಲಿಂಗ್‌ನ ಮೊದಲನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಲಾಂಗ್‌ಆನ್‌ ಕಡೆಗೆ ಸಿಕ್ಸರ್ ಬಾರಿಸುವ ಪ್ರಯತ್ನ ಮಾಡಿದಾಗ ಅದ್ಭುತವಾದ ಕ್ಯಾಚ್ ಹಿಡಿದರು, ಸೂರ್ಯಕುಮಾರ್ ಯಾದವ್. ಆದರೆ ಇದೇ ಕ್ಯಾಚ್ ಇದೀಗ ಭಾರತ ತಂಡಕ್ಕೆ ಮುಳುವಾಗಿದ್ದು, ಭಾರತ ವಿಶ್ವಕಪ್ ವಾಪಸ್ ಮಾಡಲಿ ಅಂತಿದ್ದಾರೆ ಇವರು! ಹಾಗಾದ್ರೆ ಅಸಲಿಗೆ ಆಗುತ್ತಿರುವುದು ಏನು? ಪೂರ್ತಿ ಮಾಹಿತಿಗೆ ಮುಂದೆ ಓದಿ.

ಭಾರತ ಗೆದ್ದ ವಿಶ್ವಕಪ್ ವಾಪಸ್?

ಇದೀಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳು ಸೂರ್ಯಕುಮಾರ್ ಯಾದವ್ ಕ್ಯಾಚ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ ಈ ಕ್ಯಾಚ್ ಹಿಡಿದಾಗ ಸೂರ್ಯಕುಮಾರ್ ಯಾದವ್ ಕಾಲು ಬೌಂಡರಿ ಲೈನ್‌ಗೆ ಟಚ್ ಆಗಿದೆ. ಹೀಗಾಗಿ ಇದು ಕ್ಯಾಚ್ ಅಲ್ಲವೇ ಅಲ್ಲ, ಬದಲಾಗಿ ಸಿಕ್ಸರ್ ಲೆಕ್ಕ. ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದ ಅಸಲಿ ವಿನ್ನರ್ ದಕ್ಷಿಣ ಆಫ್ರಿಕಾ. ಹೀಗಾಗಿಯೇ ಭಾರತ ತಂಡ ವಿಶ್ವಕಪ್ ವಾಪಸ್ ಮಾಡಲಿ ಅಂತಾ ಆಗ್ರಹಿಸುತ್ತಿದ್ದಾರೆ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಅಭಿಮಾನಿಗಳು. ಆದರೆ ಇದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸರಿಯಾಗಿಯೇ ಉತ್ತರ ನೀಡುತ್ತಿದ್ದಾರೆ.

145 ಕೋಟಿ ರೂಪಾಯಿ ಬಹುಮಾನ!

ಟಿ20 ವಿಶ್ವಕಪ್-2024 ಕಪ್ ಗೆದ್ದ ನಂತರ ಭಾರತ ತಂಡಕ್ಕೆ ಒಂದಲ್ಲ & ಎರಡಲ್ಲ ಭರ್ಜರಿ 145 ಕೋಟಿ ರೂಪಾಯಿಗೂ ಹೆಚ್ಚು ಹಣ ಸಿಕ್ಕಿದೆ. ಹೇಗೆ ಅಂದ್ರೆ ಐಸಿಸಿ ನೀಡಿದ ಬಹುಮಾನ ಮೊತ್ತವೆ 20 ಕೋಟಿ 42 ಲಕ್ಷ ರೂಪಾಯಿ ಆಗಿದೆ. ಹಾಗೇ ಅದರ ಜೊತೆಗೆ ಇದೀಗ ಬಿಸಿಸಿಐ ಕೂಡ 125 ಕೋಟಿ ರೂಪಾಯಿ ಬಹುಮಾನದ ಮೊತ್ತ ಘೋಷಣೆ ಮಾಡಿದೆ. ಈ ಮೂಲಕ ಒಟ್ಟಾರೆ 145 ಕೋಟಿ ರೂಪಾಯಿಗೂ ಹೆಚ್ಚು ಹಣ ಭಾರತ ತಂಡಕ್ಕೆ ಸಿಕ್ಕಿದೆ. ಇದರ ಜೊತೆಗೆ ಬೆಲೆಯೇ ಕಟ್ಟಲು ಆಗದ ಶತಕೋಟಿ ಭಾರತೀಯರ ಪ್ರೀತಿ & ಆಶೀರ್ವಾದ ಕೂಡ ಈಗ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಸಿಕ್ಕಿದೆ.