ಹುನಗುಂದ: ಪಟ್ಟಣದಿಂದ ಕೇವಲ 10 km ಅಂತರದಲ್ಲಿರುವ ಚಟ್ನಿಹಾಳ ಗ್ರಾಮಕ್ಕೆ ಹುನಗುಂದ ಘಟಕದಿಂದ ಯಾವುದೇ ಬಸ್ಸುಗಳ ಸೌಕರ್ಯ ಇರದ ಕಾರಣ ಹುನಗುಂದ ಪಟ್ಟಣದಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಚಟ್ನಿಹಾಳ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಹುನಗುಂದ ಪಟ್ಟಣಕ್ಕೆ ತೆರಳಬಯಸುವ ಎಲ್ಲಾ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದ್ದು
ಅವರು ಇಲಕಲ್ಲ ಘಟಕದ ಬಸ್ಸಿನಲ್ಲಿ ಪ್ರಯಾಣಿಸಿ ಇಲಕಲ್ಲಿಗೆ ತಲುಪಿ ನಂತರ ಹುನಗುಂದ ಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು ಹುನಗುಂದ ಘಟಕದಿಂದ ಅಮರಾವತಿ ನಿಡಸನೂರ ಮಾರ್ಗವಾಗಿ ಕರಡಿ ಮತ್ತು ಕೋಡಿಹಾಳ ಗ್ರಾಮಕ್ಕೆ ತೆರಳುವ ಬಸ್ಸುಗಳನ್ನು ನಿಡಸನೂರಿಂದ ಕೇವಲ 2 ಕೀ.ಮಿ ಅಂತರದಲ್ಲಿರುವ ಚಟ್ನಿಹಾಳ ಗ್ರಾಮಕ್ಕೆ ವಾಯಾ ಮಾಡಿಕೊಂಡು ಹೋಗುವಂತೆ ಕೋರಿ ಇಂದು ಚಟ್ನಿಹಾಳ
ಗ್ರಾಮಸ್ಥರು ಮತ್ತು ಕರ್ನಾಟಕ ಯುವರಕ್ಷಣಾ ವೇದಿಕೆಯ ಸಹಯೋಗದಲ್ಲಿ ಹುನಗುಂದ ಮತಕ್ಷೇತ್ರದ ಜನಪ್ರೀಯ ಶಾಸಕರಿಗೆ ಮತ್ತು ಹುನಗುಂದ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಂಬಲದಿನ್ನಿ ಗ್ರಾಮ ಪಂಚಾಯತ್ ಹಾಲಿ ಉಪಾಧ್ಯಕ್ಷರಾದ ಶ್ರೀ ಗ್ಯಾನಪ್ಪ ಮೂಲಿಮನಿ,ಸದಸ್ಯರಾದ ಸೋಮಪ್ಪ ಬೇಗಾರ್ ಮಾಜಿ ಸದಸ್ಯರಾದ ಗ್ಯಾನಪ್ಪ ಮೂಲಿಮನಿ, ರಮೇಶ್ ಪೂಜಾರಿ, ಮತ್ತು ಮಾಜಿ ಪಿಕೆಪಿಎಸ್ ಸದಸ್ಯರಾದ ಶ್ರೀ ರಾಮಪ್ಪ ಕಮರಿ ಮತ್ತು ಚಟ್ನಿಹಾಳ ಗ್ರಾಮದ ಮುಖಂಡರಾದ ಶ್ರೀ ಬಸವರಾಜ ಪೂಜಾರಿ,ರಾಮಪ್ಪ ತಳವಾರ್,ಶರಣಪ್ಪ ಕುರಿ,ಮತ್ತು ಕರ್ನಾಟಕ ಯುವರಕ್ಷಣಾ ವೇದಿಕೆಯ ತಾಲ್ಲೂಕಾ ಉಪಾಧ್ಯಕ್ಷರಾದ ಶ್ರೀ ನಿರುಪಾದಿ ನಾಯಕ್ ಮತ್ತು ತಾಲ್ಲೂಕಾ ಕಾರ್ಯದರ್ಶಿಗಳಾದ ಯಮನೂರ್ ಪುಣೆ ಅವರು ಉಪಸ್ಥಿತರಿದ್ದರು.