ಸಾಮಾನ್ಯವಾಗಿ ದಕ್ಷಿಣ ಕನ್ನಡ ಎಂದರೆ ಅಲ್ಲಿ ಕೇಸರಿ ಶಾಲಿಗೆ ತುಂಬಾ ಮಹತ್ವವನ್ನು ಕೊಡುತ್ತಾರೆ. ಅಷ್ಟೇ ಅಲ್ಲದೆ ಅದು ತುಂಬಾ ವಿದ್ಯಾವಂತರಿರುವ ಜಿಲ್ಲೆ ಅಂತಲೂ ಹೆಸರುವಾಸಿಯಾಗಿದೆ.
ಆದರೆ ಇದೀಗ ಯುವತಿಯೊಬ್ಬಳ್ಳನ್ನು ತಬ್ಬಿಕೊಂಡು ಕೇಸರಿ ಶಾಲು ಧರಿಸಿದ್ದ ಯುವಕರ ಗುಂಪೊಂದು ಡ್ಯಾನ್ಸ್ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ನೀವು ದಕ್ಷಿಣ ಕನ್ನಡಕ್ಕೆ ಸೇರಿದವಾರಾ? ಇದು ಯಾವ ರೀತಿಯ ಕೃಷ್ಣಾಷ್ಟಮಿ ಆಚರಣೆ? ಅಂತಲೂ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಮೆರವಣಿಗೆಗಳಲ್ಲಿ ಯುವಕ, ಯುವತಿಯರು ಡ್ಯಾನ್ಸ್ ಮಾಡುವುದು ತಪ್ಪಲ್ಲ. ಅದಕ್ಕೇ ಆದ ರೀತಿ ನೀತಿಗಳಿವೆ. ಯುವಕರು ಒಂದು ಕಡೆ, ಯುವತಿಯರು ಮತ್ತೊಂದು ಕಡೆ ಬೇರೆ ಬೇರೆ ನೃತ್ಯ ಮಾಡಲು ಅವಕಾಶವಿದೆ. ಆದರೆ ಯುವತಿಯೊಬ್ಬಳು, ಅದರಲ್ಲೂ ಯುವಕರ ಗುಂಪಿನ ನಡುವ ಸೇರಿ ಅಸಭ್ಯವಾಗಿ ವರ್ತಿಸುತ್ತಾ ಡ್ಯಾನ್ಸ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಸಮಾಜಕ್ಕೆ ಕೊಡುವ ಸಂದೇಶವಾದ್ರೂ ಏನು ಎಂದು ಸಾರ್ವಜನಿಕರು ಆಕ್ರೊಶ ಹೊರಹಾಕುತ್ತಿದ್ದಾರೆ.
ಅದರಲ್ಲೂ ಅತೀ ಹೆಚ್ಚು ಬುದ್ಧಿವಂತರನ್ನು ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇಂತಹ ಅಸಭ್ಯ ಘಟನೆ ನಡೆದಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.