ಲೈಂಗಿಕ ಕಿರುಕುಳ ಪ್ರಕರಣ: ಬಂಧನ ಭೀತಿ - ನಿರೀಕ್ಷಣಾ ಜಾಮೀನು ಪಡೆದ ಅರುಣ್ ಕುಮಾರ್ ಪುತ್ತಿಲ!

ಪುತ್ತೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲಗೆ ಜೆಎಂಎಫ್ಸಿ ಕೋರ್ಟ್ನಿಂದ ನಿರೀಕ್ಷಣ ಜಾಮೀನು ದೊರೆತಿದೆ.
ಅರುಣ್ ಪುತ್ತಿಲ 2023ರಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ವಿರುದ್ಧ 47 ವರ್ಷದ ಮಹಿಳೆ ದೂರು ನೀಡಿದ್ದರು.

ಫೋಟೋ, ಸೆಲ್ಫಿ ವಿಡಿಯೋ ತೋರಿಸಿ ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಈ ಸಂಬಂಧ ಪುತ್ತೂರಿನ ದಕ್ಷಿಣ ಕನ್ನಡ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಅರುಣ್ ಕುಮಾರ್ ಪುತ್ತಿಲ ಸೋಮವಾರ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನೀಡಿದೆ.

ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ನಾನು ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಡುತ್ತೇನೆ. ಈ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರವಿದೆ. ಇವು ನನ್ನ ವಿರುದ್ಧ ಮಹಿಳೆ ಮಾಡಿರುವ ಸುಳ್ಳು ಆರೋಪಗಳು. ಇದರಲ್ಲಿ ರಾಜಕೀಯ ಸೇಡಿನ ಹುನ್ನಾರವಿದೆ ಎಂದು ಕಂಡುಬರುತ್ತದೆ ಎಂದು ಅರುಣ್ ಪುತ್ತಿಲ ಹೇಳಿದ್ದಾರೆ.