ಪುತ್ತೂರು ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕಬ್ಬಡಿ ಪಂದ್ಯಾಟದಲ್ಲಿ ಸುಬೋಧ ಪ್ರೌಢಶಾಲೆ ಪಾಣಾಜೆ ದ್ವಿತೀಯ ಸ್ಥಾನ

ಪುತ್ತೂರು: ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಮತ್ತು ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರ ಮಂಗಲ, ಸಂಯುಕ್ತ ಆಶ್ರಯದಲ್ಲಿ ನಿನ್ನೆ (6/9/2024) ಈಶ್ವರಮಂಗಲದಲ್ಲಿ ಜರಗಿದ ಗ್ರಾಮೀಣ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಬೋಧ ಪ್ರೌಢ ಶಾಲೆಯ ಹೆಮ್ಮೆಯ ತಂಡ *ರನ್ನರ್ ಅಪ್* ಪ್ರಶಸ್ತಿಯನ್ನು ಪಡೆದಿದೆ.


 ಕುತೂಹಲಕಾರಿಯಾಗಿ ಜರಗಿದ ಸ್ಪರ್ಧೆಯಲ್ಲಿ ಆಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು ತಂಡದ ಎಲ್ಲಾ ಮಕ್ಕಳಿಗೆ, ಮಕ್ಕಳಿಗೆ ನಿರಂತರವಾಗಿ ತರಬೇತಿ ನೀಡಿದ  ಪ್ರೌಢಶಾಲೆಯ  ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ಅವರಿಗೆ ಹಾಗೂ ಮಕ್ಕಳನ್ನು


 ಪ್ರೋತ್ಸಾಹಿಸಿ ಪ್ರೇರೇಪಿಸಿದ ಸುಬೋಧ ಪ್ರೌಢ ಶಾಲೆಯ ಹೆಮ್ಮೆಯ ಹಿರಿಯ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು 
ನಮ್ಮ ಸುಬೋಧ ನಮ್ಮ ಹೆಮ್ಮೆ ಸಂಚಾಲಕರು