BREAKING NEWS : ದಕ್ಷಿಣಕನ್ನಡ : 'KSRTC' ಬಸ್ ಗೆ ಕಾರು ಡಿಕ್ಕಿಯಾಗಿ ನವವಿವಾಹಿತೆ ಸಾವು, ಪತಿಯ ಸ್ಥಿತಿ ಗಂಭೀರ!


ದಕ್ಷಿಣಕನ್ನಡ : ಇಂದು ಎಲ್ಲೆಡೆ ಗಣೇಶ ಚತುರ್ಥಿಯ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್‌ಆರ್ಟಿಸಿ ಬಸ್ ಗೆ ಕಾರು ಒಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ತಲಪಾಡಿ ಎಂಬಲ್ಲಿ ನಡೆದಿದೆ.


ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತಲಪಾಡಿ ಬಳಿ ಈ ಒಂದು ಅಪಘಾತ ಸಂಭವಿಸಿದ್ದು, ಕಾರು ಅಪಘಾತದಲ್ಲಿ ನವ ವಿವಾಹಿತ ಮಾನಸ ಸಾವನ್ನಪ್ಪಿದ್ದಾಳೆ.ಇನ್ನೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪತಿ ಅನೀಶ್ ಕೃಷ್ಣ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ನವ ದಂಪತಿಗಳಾದ ಅನಿಶ್ ಕೃಷ್ಣ ಮತ್ತು ಮಾನಸ ತೆರ್ನ ಸಮೀಪದ ಒಡ್ಯಾlದಗಯಾ ನಿವಾಸಿಗಳು ಎಂದು ತಿಳಿದುಬಂದಿದೆ.ಕಳೆದ ಎರಡು ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್ 5 ರಂದು ದಯಂತಡ್ಕ ದೇಗುಲದಲ್ಲಿ ಅನಿಶ್ ಕೃಷ್ಣ ಮತ್ತು ಮಾನಸ ಮದುವೆಯಾಗಿತ್ತು.