ಮುಡಾ ಹಗರಣ: ಸಿದ್ದರಾಮಯ್ಯಗೆ ಮತ್ತೆ ರಿಲೀಫ್, ಹೈಕೋರ್ಟ್ನಲ್ಲಿ ಇಂದು ವಾದ ವೈಖರಿ ಹೇಗಿತ್ತು? ಇಲ್ಲಿದೆ ವಿವರ


ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ. ಇದರಿಂದ ಸಿಎಂ ನಿರಾಳರಾಗಿದ್ದಾರೆ. ಇಂದು ದೂರುದಾರ ಸ್ನೇಹಮಯಿ ಕೃಷ್ಣ ಪರ ಕೆ.ಜಿ.ರಾಘವನ್ ವಾದಮಂಡಿಸಿದ್ದು, ಅದರ ವಿವರ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 02): ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ ಮತ್ತೆ ಮುಂದೂಡಿದೆ. ಸೆಪ್ಟೆಂಬರ್ 9ರಂದು ಮಧ್ಯಾಹ್ನ 2.30ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿ ಮಾಡಲಾಗಿದ್ದು, ಅಲ್ಲಿಯವರೆಗೂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್ ಸಿಕ್ಕಂತಾಗಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು ಹೇಳಿದಂತೆ ಸೆಪ್ಟೆಂಬರ್ 12ರಂದು ಅರ್ಜಿ ವಿಚಾರಣೆ ಪೂರ್ಣಗೊಳಲಿದೆ. ಈ ಮೂಲಕ ಈ ಕೇಸ್​​ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದೆ.

ಮುಡಾ ಹಗರಣ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜಭವನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಸೋಮವಾರವೂ (ಸೆಪ್ಟೆಂಬರ್ 02) ಸುಧೀರ್ಘ ವಿಚಾರಣೆ ನಡೆಯಿತು. ಸಿಎಂ ವಿರುದ್ಧ ತನಿಖೆಗೆ ಆದೇಶಿಸಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಸಿಎಂ ಪರ ವಕೀಲರು ಮತ್ತು ಸಾಲಿಸಿಟರ್ ಜನರಲ್ ಮಂಡಿಸಿದ ಸುದೀರ್ಘ ವಾದದ ಬಳಿಕ ಇಂದು ದೂರುದಾರ ಸ್ನೇಹಮಯಿ ಕೃಷ್ಣ ಪರ ಕೆ.ಜಿ.ರಾಘವನ್ ವಾದಮಂಡಿಸಿದ್ದು, ಅದರ ವಿವರ ಈ ಕೆಳಗಿನಂತಿದೆ ನೋಡಿ.


ದೂರುದಾರರ ಪರ ಹಿರಿಯ ವಕೀಲ ಕೆ.ಜಿ.ರಾಘವನ್: ಸೆಕ್ಷನ್ 7ಸಿ ಅನ್ನು ಓದಲು ಬಯಸುತ್ತೇನೆ. ಅನಗತ್ಯ ಲಾಭ, ಅನುಕೂಲ ಪಡೆಯುವುದು ಕಾಯ್ದೆಯ ವ್ಯಾಪ್ತಿಯಲ್ಲಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ. ಕಾನೂನು ಬಾಹಿರವಾಗಿಲ್ಲದಿದ್ದರೂ ಪ್ರಭಾವ ಬಳಸಿ ಲಾಭ ಪಡೆದರೆ ಅಪರಾಧ.

ಜಡ್ಜ್: ನಿಮ್ಮ ವಾದ ಸೆಲ್ಫ್ ಗೋಲ್ ಆಗಬಹುದು-ಜಡ್ಜ್

ಕೆ.ಜಿ.ರಾಘವನ್: ಈ ಕೇಸ್​ಗೆ ಸಂಬಂಧಿಸಿದಂತೆ ಈ ಮಾತು ಹೇಳುತ್ತಿಲ್ಲ. ಅನುಚಿತ ಅನುಕೂಲ ಪಡೆಯಲು ಅಧಿಕಾರಿ ಮೇಲೆ ಪ್ರಭಾವ ಬಳಸಿದರೆ ಅಪರಾಧ. ಪಡೆಯುವ ಅನುಕೂಲ ಕಾನೂನು ಬಾಹಿರವಾಗಿಲ್ಲದಿದ್ದರೂ ಅಪರಾಧ. ವೈಯಕ್ತಿಕ ಪ್ರಭಾವ ಬಳಸಿದರೂ ಅದು ಸೆಕ್ಷನ್ 7 ಅಡಿ ಅಪರಾಧ. ಒಬ್ಬ ಸಚಿವ ಇಲಾಖೆಯಲ್ಲದೇ ಬೇರೆಡೆ ಪ್ರಭಾವ ಬೀರಿದರೂ ಅಪರಾಧ. ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯತೆ ತರಲು ಈ ಕಾಯ್ದೆ ರಚಿಸಲಾಗಿದೆ.

ಕೆ.ಜಿ.ರಾಘವನ್: ಸಾರ್ವಜನಿಕರಿಗೆ ಶುದ್ಧ ಆಡಳಿತದಲ್ಲಿ ನಂಬಿಕೆ ಬರಬೇಕು. ಇದು ಇಬ್ಬರ ನಡುವಿನ ವಿವಾದದ ವಿಷಯವಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವಾಗಿದೆ. ಮುಡಾ ಹಗರಣದ ಬಗ್ಗೆ ತನಿಖೆಗೆ ಆಯೋಗ ರಚನೆಯಾಗಿದೆ.

ಜಡ್ಜ್: ಆಯೋಗದ ರಚನೆ ಬಗ್ಗೆ ನಿಮಗೆ ಸಮಾಧಾನವಿದೆಯೇ.

ಕೆ.ಜಿ.ರಾಘವನ್: ಇಲ್ಲ, ಆಯೋಗದ ವರದಿಗೆ ಮಹತ್ವವಿಲ್ಲ. ಅದು ಜಾರಿಯಾಗಲ್ಲ.

ಜಡ್ಜ್​​: ಆಯೋಗದ ವರದಿಯವರೆಗೆ ಈ ತನಿಖೆಗಳ ಅಗತ್ಯವಿದೆಯೇ? ನಾವು ಆಯೋಗದ ವರದಿ ಜಾರಿಯಾಗುವಂತೆ ಮಾಡಿದರೆ?

ಕೆ.ಜಿ.ರಾಘವನ್: ಸರ್ಕಾರವೇ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚಿಸಿದೆ. ಹೀಗಾಗಿ ರಾಜ್ಯಪಾಲರು 17ಎ ಅಡಿ ಅನುಮತಿ ನೀಡಿರುವುದು ಸರಿಯಿದೆ. ಈ ಹಂತದಲ್ಲಿ ತನಿಖೆಯನ್ನು ತಡೆಹಿಡಿಯಬಾರದು. ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು.

ಕೆ.ಜಿ.ರಾಘವನ್: ನಿಂಗ ಎಂಬುವರಿಗೆ ಈ ಜಮೀನು ಮಂಜೂರಾಗಿತ್ತು. ನಿಂಗನಿಗೆ ಮೂವರು ಮಕ್ಕಳು, ಮಲ್ಲಯ್ಯ, ಮೈಲಾರಯ್ಯ, ದೇವರಾಜು, ಮಲ್ಲಯ್ಯ, ದೇವರಾಜು ಹಕ್ಕನ್ನು ಮೈಲಾರಪ್ಪನಿಗೆ ಬಿಡುಗಡೆ ಮಾಡಿದ್ದರು. ಹೀಗಾಗಿ ದೇವರಾಜುವಿಗೆ ಈ ಜಮೀನಿನ ಮೇಲೆ ಹಕ್ಕಿರಲಿಲ್ಲ. 3 ಎಕರೆಗಿಂತ ಹೆಚ್ಚಿನ ಭೂಮಿ ಸ್ವಾಧೀನವಾದರೆ 4800 ಚದರಡಿ ಪರಿಹಾರ. 1994ರ ನಿಯಮದ ಪ್ರಕಾರ ಎರಡು ಸೈಟಿಗಷ್ಟೇ ಅವಕಾಶವಿತ್ತು. ನಿಂಗ ಎಂಬುವರಿಗೆ ಈ ಜಮೀನು ಮಂಜೂರಾಗಿತ್ತು… ನಿಂಗನಿಗೆ ಮೂವರು ಮಕ್ಕಳು, ಮಲ್ಲಯ್ಯ, ಮೈಲಾರಯ್ಯ, ದೇವರಾಜು… ಮಲ್ಲಯ್ಯ, ದೇವರಾಜು ತಮ್ಮ ಹಕ್ಕನ್ನು ಮೈಲಾರಪ್ಪನಿಗೆ ಬಿಡುಗಡೆ ಮಾಡಿದ್ದರು…. ಹೀಗಾಗಿ ದೇವರಾಜುವಿಗೆ ಈ ಜಮೀನಿನ ಮೇಲೆ ಹಕ್ಕಿರಲಿಲ್ಲ.

ಕೆ.ಜಿ.ರಾಘವನ್: ಡಿನೋಟಿಫಿಕೇಷನ್ ಕೇಳಿ ಅರ್ಜಿ ಸಲ್ಲಿಸಿದ್ದು ದೇವರಾಜು. ಆದರೆ ದೇವರಾಜು ಆಗ ಜಮೀನಿನ ಮಾಲೀಕನೇ ಅಲ್ಲ. 20.08.1997 ರಂದು ಅಂತಿಮ ಭೂಸ್ವಾಧೀನ ಅಧಿಸೂಚನೆಯಾಯಿತು. 30.03.1998 ರಂದು ಜಮೀನಿಗೆ ಪರಿಹಾರವೂ ನಿಗದಿಯಾಯಿತು. 18.05.1998 ರಂದು 3.16 ಎಕರೆ ಜಮೀನು ಡಿನೋಟಿಫೈ ಮಾಡಲಾಯಿತು. 25.08.2004 ರಂದು ದೇವರಾಜು ಈ ಜಮೀನನ್ನು ಬಿ.ಎಂ.ಮಲ್ಲಿಕಾರ್ಜುನ್ ಗೆ ಮಾರಾಟ. ನಂತರ ಭೂಪರಿವರ್ತನೆಗೂ ಮುನ್ನ ನಿವೇಶನ ಸ್ಥಳ ತನಿಖೆ ಮಾಡಲಾಯಿತು.

ಕೆ.ಜಿ.ರಾಘವನ್: ಭೂಪರಿವರ್ತನೆ ವೇಳೆ ಭೂಸ್ವಾಧೀನಗೊಂಡು ನಿವೇಶನ ಹಂಚಲಾಗಿತ್ತು. ಈ ಅಕ್ರಮಗಳ ಬಗ್ಗೆ ತನಿಖೆಯ ಅಗತ್ಯವಿದೆ. ತನಿಖೆ ತಡೆಹಿಡಿಯಲು ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದೇಕೆ ಎಂಬುದೇ ಅಚ್ಚರಿ. ಸಾಮಾನ್ಯ ದೂರು ಬಂದರೂ ಇಂತಹ ವಿಚಾರದಲ್ಲಿ ತನಿಖೆ ಆಗಬೇಕು.

ಕೆ.ಜಿ.ರಾಘವನ್: ಭೂಪರಿವರ್ತನೆ ವೇಳೆ ಭೂಸ್ವಾಧೀನಗೊಂಡು ನಿವೇಶನ ಹಂಚಲಾಗಿತ್ತು. ಈ ಅಕ್ರಮಗಳ ಬಗ್ಗೆ ತನಿಖೆಯ ಅಗತ್ಯವಿದೆ. ತನಿಖೆ ತಡೆಹಿಡಿಯಲು ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದೇಕೆ ಎಂಬುದೇ ಅಚ್ಚರಿ. ಸಾಮಾನ್ಯ ದೂರು ಬಂದರೂ ಇಂತಹ ವಿಚಾರದಲ್ಲಿ ತನಿಖೆ ಆಗಬೇಕು ಈ ಪ್ರಕರಣದಲ್ಲಿ ಸಂದೇಹದ ಮೊನೆ ಇದೆ.

ಜಡ್ಜ್: ಇದು ಅವಸರದಲ್ಲಿ ಮೂಡಿದ ಸಂದೇಹವಲ್ಲವಷ್ಟೇ?

ಕೆ.ಜಿ.ರಾಘವನ್: ಇದು ನಗಣ್ಯ ವಿಚಾರಕ್ಕೆ ಮೂಡಿದ ಸಂದೇಹವಲ್ಲ. ಡಿನೋಟಿಫೈ ಆದ ಜಮೀನಿನಲ್ಲಿ ನಿವೇಶನ ಹಂಚಿಕೆಯಾಗಿತ್ತು. 2010ರಲ್ಲಿ ಈ ಜಮೀನನ್ನ ಮಲ್ಲಿಕಾರ್ಜುನ್ ಸಿಎಂ ಪತ್ನಿಗೆ ದಾನ ನೀಡಿದ್ರು. ಈ ಕೇಸ್​​ನಲ್ಲಿ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ರು. ಸಾಮಾನ್ಯ ಪ್ರಜೆಯಾಗಿದ್ದರೆ ಬದಲಿ ನಿವೇಶನ ನೀಡುತ್ತಿರಲಿಲ್ಲ. ನಿಮ್ಮ ಮಾಲೀಕತ್ವ ಸಾಬೀತುಪಡಿಸಿ ಎಂದು ಕೇಳುತ್ತಿದ್ದರು. ಜಮೀನು ಸ್ವಾಧೀನವಾಗಿ ಹಣ ಡೆಪಾಸಿಟ್ ಆದ ಮೇಲೆ ಬದಲಿ ನಿವೇಶನದ ಪ್ರಶ್ನೆಯಿಲ್ಲ. 23.6.2014 ರಂದು ಬದಲಿ ನಿವೇಶನಕ್ಕೆ ಸಿಎಂ ಪತ್ನಿ ಅರ್ಜಿ ಸಲ್ಲಿಸುತ್ತಾರೆ.

ಜಡ್ಜ್ : 60 40 ಗೆ ಅರ್ಜಿ ಸಲ್ಲಿಸಬಹುದಾಗಿತ್ತೇ

ಕೆ.ಜಿ.ರಾಘವನ್: 60 40 ಯಲ್ಲ ಒಂದು ಸೈಟೂ ಅರ್ಹತೆ ಇರಲಿಲ್ಲ. 50 50 ಅಡಿ 14 ನಿವೇಶನ ಹಂಚುವ ನಿಯಮ ಆಗ ಇರಲಿಲ್ಲ.

ಕೆ.ಜಿ.ರಾಘವನ್ : ಒಂದು ತಪ್ಪಾದರೆ ಒಕೆ, ಪದೇ ಪದೇ ತಪ್ಪಾದರೆ ದುರುದ್ದೇಶವಿದೆ ಎಂದರ್ಥ. 1998ರಲ್ಲಿ 3.16 ಎಕರೆಗೆ 3.24 ಲಕ್ಷ ರೂ. ಪರಿಹಾರ ನಿಗದಿ ಆಗಿತ್ತು. ಆದರೆ ಸಿಎಂ ಪತ್ನಿಗೆ 3.24 ಲಕ್ಷ ರೂಪಾಯಿಯ ಪರಿಹಾರ ಕೊಡ್ತಿದ್ದೀರಾ? 14 ಸೈಟ್​​ನ ಮೌಲ್ಯ ಎಷ್ಟಿದೆ, ಸುಣ್ಣಕ್ಕೆ ಬೆಣ್ಣೆಯ ಬೆಲೆ ನೀಡ್ತಿದ್ದೀರಾ? ಹೀಗಾಗಿಯೇ ಈ ಬಗ್ಗೆ ತನಿಖೆಯಾಗಬೇಕಾದ ಅಗತ್ಯವಿದೆ ಎಂದರು.

ಕೆ.ಜಿ.ರಾಘವನ್ : 1998 ರ ಭೂಸ್ವಾಧೀನಕ್ಕೆ 2015ರ ನೋಟಿಫಿಕೇಷನ್ ಅನ್ವಯಿಸಿದ್ದೀರಿ. ಮಾಲೀಕರೇ ಅಲ್ಲದವರಿಗೆ ಡಿನೋಟಿಫಿಕೇಷನ್ ಮಾಡಿದ್ದೀರಿ. ಕಡಿಮೆ ಬೆಲೆಯ ಜಮೀನಿಗೆ ಅತಿ ಹೆಚ್ಚಿನ ಪರಿಹಾರ ನೀಡಿದ್ದೀರಿ. ತನಿಖೆ ನಡೆಸಲು ಇನ್ನೆಷ್ಟು ಸಂಗತಿಗಳು ಬೇಕು. ಸಿಎಂ ಮತ್ತು ಈ ಘಟನೆಗೂ ಸಂಬಂಧವೇನು ಎಂಬ ಪ್ರಶ್ನೆ ಕೇಳಿದ್ದೀರಿ. ಈ ಎಲ್ಲಾ ಘಟನೆ ನಡೆದಾಗ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು.

ಕೆ.ಜಿ.ರಾಘವನ್ : ಸಿಎಂ ಪತ್ನಿಗೆ ಬೇಕಾದಂತೆ ನಿಯಮಗಳನ್ನು ಬದಲಿಸಿಕೊಂಡಿದ್ದಾರೆ. 2017ರಲ್ಲಿ 50:50 ಕೊಡಲು ಸಮ್ಮತಿ ನೀಡಲು ನಿರ್ಣಯ. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ತಾವು ಸಿಎಂಗೆ ಲಿಂಕ್ ಹೇಳಿ ಎನ್ನುತ್ತಿದ್ದಿರಿ ಲಿಂಕ್ ಇದೆ.

ಜಡ್ಜ್: 2022ರ ಜ.12ರಂದು 50:50 ಅಡಿ 14 ನಿವೇಶನಗಳ ಹಂಚಿಕೆ ನಂತರ ಈ 50:50 ಹಂಚಿಕೆ ನಿಲ್ಲಿಸಲಾಯಿತೆಂಬುದು ನಿಜವೇ?

ಕೆ.ಜಿ.ರಾಘವನ್: ಬೇರೆಯವರಿಗೆ ಹಂಚಿಕೆ ಮಾಡಿದ ಬಗ್ಗೆ ತಿಳಿದಿಲ್ಲ. 14.3.2023 ನಂತರ 50 50 ಹಂಚಿಕೆಯಾಗಿಲ್ಲ. ಮುಡಾ ಹಗರಣಗಳ ಸಂಬಂಧ ಸರ್ಕಾರ ಆಯೋಗ ರಚಿಸಿದೆ.

ಜಡ್ಜ್: ಈ ಕೇಸಿಗೂ ಮುಡಾ ತನಿಖಾ ಆಯೋಗಕ್ಕೂ ಸಂಬಂಧವಿದೆಯೇ?

ಕೆ.ಜಿ.ರಾಘವನ್: ಸಿಎಂ ಪತ್ನಿಯ ನಿವೇಶನ ಹಂಚಿಕೆ ಬಗ್ಗೆ ಆಯೋಗ ರಚಿಸಿಲ್ಲ. ಮುಡಾದ ಸಾಮಾನ್ಯ ಆಡಳಿತಾತ್ಮಕ ಕ್ರಮಗಳ ತನಿಖೆಗೆ ಆಯೋಗ ರಚಿಸಲಾಗಿದೆ ಎಂದು ಹೈಕೋರ್ಟ್ ಜಡ್ಜ್ ನಾಗಪ್ರಸನ್ನ ಅವರ ಪ್ರಶ್ನೆಗೆ ಉತ್ತರಿಸಿದರು.

ಕೆ.ಜಿ.ರಾಘವನ್: 2015 ರಲ್ಲಿ 50 50 ಹಂಚಿಕೆ ಮಾಡುವಂತೆ ನಿಯಮ ರೂಪಿಸಲಾಯಿತು. ಸಿಎಂ ಪತ್ನಿ 23.6.2014 ರಲ್ಲಿ ಸಿಎಂ ಪತ್ನಿ ಮನವಿ ಸಲ್ಲಿಸಿದರು. 1998 ರ ಭೂಸ್ವಾಧೀನಕ್ಕೆ 2015ರರಲ್ಲಿ 50 50 ನಿಯಮ ಅನ್ವಯಿಸಲು ಸಾಧ್ಯವೇ. 2017 ಡಿಸೆಂಬರ್ ತಿಂಗಳಿನಲ್ಲಿ ಸಿಎಂ ಪತ್ನಿಗೆ 50 50 ಹಂಚಿಕೆ ನಿರ್ಣಯಿಸಲಾಯಿತು. ಸಿಎಂ ಗೂ ಮುಡಾ ಹಗರಣಕ್ಕೂ ಸಂಬಂಧವಿದೆಯೇ ಎಂದರೆ ಹೌದು ಎನ್ನುತ್ತೇನೆ. ಸಿಎಂ ಹಾಗೂ 2017 ರಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಕ್ಕೂ ಸಂಬಂಧವಿದೆ.

ಕೆ.ಜಿ.ರಾಘವನ್: ಒಂದು ಸೈಟ್​​ಗೂ ಅರ್ಹತೆ ಇಲ್ಲದವರಿಗೆ 14 ಸೈಟ್ ನೀಡಿದ್ದಾರೆ. ಇಂತಹ ಕೃತ್ಯಕ್ಕೆ ತನಿಖೆ ಅವಶ್ಯಕತೆ ಇಲ್ಲವೆಂದು ಹೇಳಲು ಸಾಧ್ಯವೇ? 2017ರ ನಿರ್ಣಯಕ್ಕೂ ಸಿಎಂ ಅಧಿಕಾರದಲ್ಲಿದ್ದದ್ದಕ್ಕೂ ಸಂಬಂಧವಿದೆ. ಮುಡಾ ಹಗರಣದ ಬಗ್ಗೆ ಖಾಸಗಿ ದೂರು ದಾಖಲಿಸಲಾಗಿದೆ. ರಾಜ್ಯಪಾಲರ ಅನುಮತಿಯ ಮಾನ್ಯತೆ ಬಗ್ಗೆ ವಿಚಾರಣಾ ನ್ಯಾಯಾಲಯ ಪರಿಶೀಲಿಸಬಹುದು ಎಂದು ಹೇಳಿ ವಾದ ಅಂತ್ಯಗೊಳಿಸಿದರು.

ಜಡ್ಜ್: ರಾಘವನ್ ವಾದಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪ್ರತಿಕ್ರಿಯಿಸಿ, ರಾಜ್ಯಪಾಲರ ಅನುಮತಿ ಬಗ್ಗೆ ಸಾಂವಿಧಾನಿಕ ಕೋರ್ಟ್ ತೀರ್ಮಾನಿಸಬೇಕು. ಹೈಕೋರ್ಟ್ ಗೆ ರಾಜ್ಯಪಾಲರ ಆದೇಶದ ಬಗ್ಗೆ ತೀರ್ಪು ನೀಡುವ ಅಧಿಕಾರವಿದೆ.

ಎಜಿ ಶಶಿಕಿರಣ್ ಶೆಟ್ಟಿ: ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಅಡ್ವೊಕೆಟ್ ಜನರಲ್ ಅಭಿಪ್ರಾಯದ ಬಗ್ಗೆಯೂ ವಾದಿಸಬೇಕಿದೆ.. ಈ ವಾರಾಂತ್ಯ ಹಬ್ಬವಿದೆ ರಜೆಗಳಿವೆ. ಹೀಗಾಗಿ ಒಂದು ವಾರ ಕಾಲಾವಕಾಶ ನೀಡಲು ಎಜಿ ಶಶಿಕಿರಣ್ ಶೆಟ್ಟಿ ಹೈಕೋರ್ಟ್​ಗೆ ಮನವಿ ಮಾಡಿದರು.

ಜಡ್ಜ್: ಎಜಿ ಶಶಿಕಿರಣ್ ಶೆಟ್ಟಿ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಹಬ್ಬಕ್ಕೂ ಮೊದಲೇ ವಾದಮಂಡನೆ ಮುಗಿಸಿಬಿಡಿ ಎಂದರು.

ಸಿಎಂ ಪರ ವಕೀಲ ಸಿಂಘ್ವಿ: ಅಡ್ವೊಕೆಟ್ ಜನರಲ್ ವಾದಿಸಿದ ಮೇಲೆ ನಾನು ವಾದಿಸುತ್ತೇನೆ. ಸೆಪ್ಟೆಂಬರ್ 9 ಅಥವಾ 21 ರಂದು ನಾನು ವಾದಿಸುತ್ತೇನೆ ಎಂದರು.

ಜಡ್ಜ್: ಅಷ್ಟು ದೂರದ ದಿನಾಂಕವನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.

ಜಡ್ಜ್: ನೀವುಗಳು ಹಲವು ಸಂಪುಟಗಳ ದಾಖಲೆ ನೀಡಿದ್ದೀರಿ. ನಾನು ಎಲ್ಲವನ್ನೂ ಪರಿಶೀಲಿಸಿ ವಾದಮಂಡಿಸಬೇಕಿದೆ. ಹೀಗಾಗಿ ನೀವು ಬೇಗ ವಾದಮಂಡನೆ ಮುಗಿಸಬೇಕು. ವಿಚಾರಣಾ ನ್ಯಾಯಾಲಯದ ಕಲಾಪ ಬಹಳ ಕಾಲ ಮುಂದೂಡುವುದು ಸೂಕ್ತವಲ್ಲ ಎಂದು ಹೇಳಿ ಎಜಿ ಮನವಿ ಮೇರೆಗೆ ಸೆಪ್ಟೆಂಬರ್ 9ಕ್ಕೆ ವಿಚಾರಣೆ ಮುಂದೂಡಿದರು.

ಸಿಎಂ ಪರ ವಕೀಲ ಸಿಂಘ್ವಿ: ಜು.12ರಂದು ವಾದಿಸುವುದಾಗಿ ಸಿಎಂ ಪರ ಮನು ಸಿಂಘ್ವಿ ಹೇಳಿದರು.

ಜಡ್ಜ್: ಸೆಪ್ಟೆಂಬರ್ 12ರಂದು ಸಂಪೂರ್ಣ ವಿಚಾರಣೆ ಮುಗಿಸೋಣ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.