ಕಾಂಗ್ರೆಸ್ ಪಕ್ಷದ ಯುವ ಸಂಸದೆಯನ್ನು ಮದುವೆಯಾಗಲಿದ್ದಾರೆ Rahul Gandhi ; ವೈರಲ್ ಆಗುತ್ತಿದೆ ಇವರಿಬ್ಬರ ಫೋಟೋಸ್
ಸಲ್ಮಾನ್ ಖಾನ್ ಹೊರತಾಗಿ ರಾಹುಲ್ ಗಾಂಧಿ ಕೂಡ ಮದುವೆಯ ವಿಚಾರವಾಗಿ ಆಗಿಂದಾಗೆ ಸೌಂಡ್ ಮಾಡುತ್ತಿರುತ್ತಾರೆ. ಕೆಲವರ ಹೆಸರು ಕೂಡ ರಾಹುಲ್ ಜೊತೆ ಆಗಿಂದಾಗೆ ಕೇಳಿ ಬರುತ್ತಿರುತ್ತದೆ. ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಈ ಕುರಿತು ಮಾತನಾಡಿದ್ದ ರಾಹುಲ್ ತಾವು ಈ ವಿಚಾರವನ್ನು ಹೇಗೆ ಅವಾಯ್ಡ್ ಮಾಡುತ್ತಿದ್ದಾರೆ ಮತ್ತು ಅದನ್ನು ಮುಂದುವರೆಸುವುದಾಗಿ ಹೇಳಿದ್ದರು. ಇದೀಗ ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದೆಯನ್ನು ಮದುವೆಯಾಗಲಿದ್ದಾರೆ ಎಂದು ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷದ ಸಂಸದೆ, ಮಹಾರಾಷ್ಟ್ರ ಮೂಲದ ಪ್ರಣಿತಿ ಶಿಂಧೆ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಇವರಿಬ್ಬರು ಜತೆಯಾಗಿ ತೆಗೆಸಿಕೊಂಡಿರುವ ಫೋಟೋ ಈ ಊಹಾಪೋಹಗಳನ್ನು ಹುಟ್ಟು ಹಾಕಿದೆ. ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ಒಂದರಲ್ಲಿ ಲಾಲು ಪ್ರಸಾದ್ ಯಾದವ್ ಕೂಡ ರಾಹುಲ್ ಮದುವೆ ಬಗ್ಗೆ ಮಾತನಾಡುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿರುವ ವದಂತಿಗಳ ನಡುವೆಯೇ ರಾಹುಲ್ ಗಾಂಧಿ ಅಥವಾ ಪ್ರಣಿತಿ ಶಿಂಧೆ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.