ನಾನು BJP ಕಾರ್ಯಕ್ರಮಕ್ಕೆ ಹೋಗಿಲ್ಲ - ಶಾಸಕನಾಗಿ VHP ಕಾರ್ಯಕ್ರಮಕ್ಕೆ ಹೋಗಿದ್ದೆ - ಅಶೋಕ್ ಕುಮಾರ್ ರೈ

ಪುತ್ತೂರು : ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದರ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟನೆ ನೀಡಿದ್ದು, ನಾನು ಯಾವುದೇ ಪಕ್ಷದ ಬ್ಯಾನರ್ ಹಾಕಿದ ಕಾರ್ಯಕ್ರಮ ಅಥವಾ ಬಿಜೆಪಿ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ಹೇಳಿದ್ದಾರೆ


ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವ ಹಿಂದೂ ಪರಿಷತ್‌ನ ಕಮಿಟಿಯವರು ಬಂದು ನನಗೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ್ದರು. ಅವರಲ್ಲಿ ನನಗೆ ಚುನಾವಣೆ ವೇಳೆ ಸಹಾಯ ಮಾಡಿದ ಹಿಂದೂಗಳೂ ಇದ್ದಾರೆ. ಚುನಾವಣೆ ಸಹಕಾರ ಎಂದರೆ ಹಣ ಕೊಟ್ಟಿದ್ದಲ್ಲ. ನನಗೆ ಮತ ಹಾಕಿದ ಹಾಗೂ ಮತ ಹಾಕಿಸಿದ ಹಿಂದೂಗಳು ಇದ್ದಾರೆ.


 ಅವರು ಕರೆದ ಹಿನ್ನೆಲೆಯಲ್ಲಿ ಹೋಗಿ ಬಂದಿದ್ದೇನೆ, ಆದರೆ ಭಾಷಣ ಮಾಡಿಲ್ಲ. ಇದರ ಮಾಹಿತಿ ಇಲ್ಲದವರು ಹಾಗೂ ತಪ್ಪು ಮಾಹಿತಿ ಇರುವವರು ಮಾತನಾಡುತ್ತಿದ್ದಾರೆ ಎಂದರು.

ನಾನು 22 ವರ್ಷ ಬಿಜೆಪಿಯಲ್ಲಿದ್ದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೇಳಿದೆ, ಕೊಡಲಿಲ್ಲ. ವಿಎಚ್‌ಪಿ ಕಾರ್ಯಕ್ರಮಕ್ಕೆ ಹೋದ ಮಾತ್ರಕ್ಕೆ ಬಿಜೆಪಿಗೆ ಹೋಗ್ತೇನೆ ಎನ್ನುವುದು ಸರಿಯಲ್ಲ. ನನ್ನನ್ನು ಶಾಸಕ ಮಾಡಿದ ಕಾಂಗ್ರೆಸ್‌ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. 




ನನ್ನ ಧರ್ಮ ನನಗೆ ಬೇಕು, ಅದೇ ರೀತಿ ಬೇರೆಯವರ ಧರ್ಮವನ್ನು ವಿರೋಧ ಮಾಡಲ್ಲ. ಶಾಸಕನಾಗುವ ಮೊದಲೂ ಪಕ್ಷಾತೀತ ನೆಲೆಯಲ್ಲಿ ಕೆಲಸ ಮಾಡಿದ್ದೇನೆ, ಈಗಲೂ ಮಾಡುತ್ತಿದ್ದೇನೆ. ಪಕ್ಷ ವಿರೋಧಿ ಕೆಲಸವನ್ನು ಮಾಡಿಲ್ಲ ಎಂದು ಅಶೋಕ್‌ ರೈ ಹೇಳಿದರು.