Puttur: ಶಾಸಕರು ಸಂಘ ಪರಿವಾರದ ಕಾರ್ಯಕ್ರಮದಲ್ಲಿ, ಬಾಗಿ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ; ಕಾಂಗ್ರೆಸ್ ಮುಖಂಡರ ತುರ್ತು ಸಭೆ..


ಪುತ್ತೂರು: ಪುತ್ತೂರಿನ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಯವರು, ಇತ್ತೀಚೆಗೆ ಸಂಘ ಪರಿವಾರದ ಸಂಘಟನೆ ವಿಶ್ವ ಹಿಂದೂ ಪರಿಷತ್‌ ವತಿಯಿಂದ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಅಸಮಾಧಾನದ ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್ ಪಕ್ಷದ ಪ್ರಮುಖ ಮುಸ್ಲಿಂ ಮುಖಂಡರ ಸಭೆಯು ಪುತ್ತೂರಿನಲ್ಲಿ ನಡೆದು, ಈ ವಿಚಾರದಲ್ಲಿ ಚರ್ಚೆ ನಡೆಸಲಾಯಿತು.

ಕಾಂಗ್ರೆಸ್‌ ಪಕ್ಷದ ಜಾತ್ಯತೀತ ಸಿದ್ದಾಂತದ ಅಡಿಯಲ್ಲಿ
ಚುನಾಯಿತರಾದ ಶಾಸಕರ ಈ ನಡೆಯ ಬಗ್ಗೆ ತೀವ್ರ
ಖಂಡನೆ ವ್ಯಕ್ತವಾಯಿತು. ಬಾಬರಿ ಮಸೀದಿ ಧ್ವಂಸ
ಪ್ರಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ವಿಶ್ವ
ಹಿಂದೂ ಪರಿಷತ್ತಿನ ಭೂಮಿ ಪೂಜೆ ಕಾರ್ಯಕ್ರಮದಲ್ಲಿ
ಶಾಸಕರು ಭಾಗಿಯಾಗಿ, 



ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ
ಕಾಂಗ್ರೆಸ್ ಪಕ್ಷದ ಪ್ರಮುಖ ಬೆನ್ನೆಲುಬಾದ ಮುಸ್ಲಿಂ
ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದ್ದಾರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರವನ್ನು
ಕಂಡುಕೊಳ್ಳುವುದೆಂದು ಸಭೆಯು ಸರ್ವಾನುಮತದಿಂದ ನಿರ್ಣಯಿಸಿತು.