By Election: ಸಿಪಿ ಯೋಗೀಶ್ವರ್ V/S ನಿಖಿಲ್ ಕುಮಾರಸ್ವಾಮಿ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ 19000 ಮತಗಳ ಮುನ್ನಡೆ ..! CP Yogeshwar V/s Nikhil Kumaraswamy


ಚೆನ್ನಪಟ್ಟಣ: ರಾಜ್ಯದಲ್ಲಿ ಇಂದು ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆಯಿಂದಾನೇ ನಡೆಯುತ್ತಿದೆ. ಚನ್ನಪಟ್ಟಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ಎಲ್ಲರ ಚಿತ್ತ ಇಂದು ಅತ್ತ ಕಡೆಯೇ ನೆಟ್ಟಿದೆ‌. ಮತ ಎಣಿಕೆ ನಡೆಯುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ಚನ್ನಪಟ್ಟಣದಲ್ಲಿ ಸಿಪಿ ಯೋಗೀಶ್ವರ್ ಮುನ್ನಡೆ ಸಾಧಿಸಿದ್ದಾರೆ.


ಎಂಟನೇ ಸುತ್ತಿನ ಮತ ಎಣಿಕೆಯಲ್ಲೂ ಸಿಪಿ ಯೋಗೀಶ್ವರ್ ಮುನ್ನಡೆ ಸಾಧಿಸಿದ್ದಾರೆ. 19,178 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಹಿನ್ನಡೆ ಸಾಧಿಸಿದ್ದಾರೆ.

ಉಳಿದಂತೆ ಇನ್ನು ಎರಡು ಕ್ಷೇತ್ರಗಳ ಮತ ಎಣಿಕೆ ಕಾರ್ಯವೂ ನಡೆಯುತ್ತಿದೆ. ಹಾವೇರಿಯ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರದಥಿ ಯಾಸೀರ್ ಮುನ್ನಡೆ ಸಾಧಿಸಿದ್ದಾರೆ. ಆರಂಭದ ಮತ ಎಣಿಕೆಯಲ್ಲಿ ಭರತ್ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದರು. ಇದೀಗ ಯಾಸೀರ್ ಮುನ್ನಡೆ ಸಾಧಿಸಿದ್ದಾರೆ.