ಮಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ವರ್ಷಂಪ್ರತಿ ನೀಡುವ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಹಿಂದೆ ನಡೆಯುತ್ತಿದ್ದಂತೆ ಸಮಿತಿಯನ್ನು ಮಾಡದೆ ರಾತ್ರೋರಾತ್ರಿಯಲ್ಲಿ ಕೆಲವೊಂದು ವ್ಯಕ್ತಿಗಳ ಹಣಬಲ ರಾಜಕೀಯ ಹಿತಾಸಕ್ತಿಯನ್ನು ಹೊಂದಿದವರನ್ನು ನೇಮಕಾತಿ ಮಾಡಿ ನೈಜ ಸಾಧಕರಿಗೆ ವಂಚನೆಯನ್ನು ಮಾಡಲಾಗಿದೆ ಎಂಬ ವಿಷಯಗಳು ಕೇಳಿಬಂದಿದೆ. ಇದರಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವವು ಮಂಗಳೂರು ನೆಹರು ಮೈದಾನದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಕೆಲವೊಂದು ಆಕ್ಷೇಪಣಾ ಮಾತುಗಳು ಗೊಂದಲಗಳು ಗದ್ದಲಗಳಿಂದಾಗಿ ಉತ್ಸವಕ್ಕೆ ನೆಲೆ ಬೆಲೆ ಇಲ್ಲದಂತಾಗಿದೆ.
ಪ್ರತಿಷ್ಠವಾಗಿ ಸಾಧನೆ ಮಾಡಿದವರ ಸಾಧನೆಯ ಎದುರುಗಡೆ ಇನ್ಯಾರದ ಹೆಸರನ್ನು ದಾಖಲಿಸಿ ಪ್ರಶಸ್ತಿಯನ್ನು ನೀಡಿರುತ್ತಾರೆ ಅಲ್ಲದೇ ಕೆಲವೊಂದು ಸಂಘ ಸಂಸ್ಥೆಗಳನ್ನು ರಾತ್ರಿ ಹೊತ್ತು ಆಯ್ಕೆ ಹೊಂದಿದ್ದ ಹೆಸರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹೆಸರೇ ನಾಪತ್ತೆ ಈ ಬಗ್ಗೆ ಉಸ್ತುವಾರಿ ಸಚಿವರ ಎದುರುಗಡೆ ದಿಗ್ಬಂದನಾ ಕಾರ್ಯವು ನಡೆಯಿತು ಕೆಲವರು ಈ ಬಗ್ಗೆ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಯವರಿಗೆ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಗೆ ಲಿಖಿತ ದೂರನ್ನು ಸಲ್ಲಿಸಿರುವುದು ಕಂಡುಬಂದಿರುತ್ತದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪ್ರಶಸ್ತಿ ಕೊಡುವುದರಲ್ಲಿ ಬಹಳಷ್ಟು ಲೇನಾದೇನಾ ನಡೆದಿದೆ ಎಂಬುದಾಗಿ ಜಗ್ಗಜಾಹಿರಾಗಿ ಕೇಳಿ ಬರುತ್ತಿತ್ತು ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದ್ದಂತೆ ಅಲ್ಲಲ್ಲಿ ಗುಂಪು ಗದ್ದಲ ನಡೆಯುತ್ತಿರುವುದು ಕಂಡುಬಂದಿತ್ತು. ಜಿಲ್ಲಾಧಿಕಾರಿಯವರ ಬೇಜವಾಬ್ದಾರಿಯುತ ವರ್ತನೆ ಇದಾಗಿದೆಯೇ ಎಂದು ಸಂಶಯಾಸ್ಪದ ಮಾತುಗಳು ಕೇಳಿ ಬರುತ್ತಿತ್ತು.
ರಾತ್ರಿ ಹೊತ್ತು ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದರು ತಪ್ಪಾಗಿರುವ ವಿಷಯವನ್ನು ತಿಳಿಸಿದಾಗ ಯಾರು ಸ್ಪಂದನೆ ನೀಡಿರುವುದಿಲ್ಲ ಯಾರದೋ ಸಾಧನೆ ಇನ್ಯಾರಿಗೋ ಪ್ರಶಸ್ತಿ ಎಂಬಂತೆ ಗೊಂದಲಮಯ ಆಯ್ಕೆ ಪಟ್ಟಿ ರಾತ್ರಿ ಹೊತ್ತು ಬಿಡುಗಡೆ ಹೊಂದಿರುತ್ತದೆ ಇದರ ಬಗ್ಗೆ ವೇದಿಕೆಯಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದಾಗ ಅಲ್ಲಿಂದಲೇ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಯರಲ್ಲಿ ಏನಿದು ಯಾರದ್ದೋ ಸಾಧನೆಗೆ ಯಾರಿಗೆ ಪ್ರಶಸ್ತಿ ನೀಡುತ್ತೀರಿ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿರುತ್ತಾರೆ ಎಂಬ ಮಾಹಿತಿಯು ಲಭ್ಯವಾಗಿದೆ ಈ ಹಿನ್ನೆಲೆಯಲ್ಲಿ ನೈಜ ಸಾಧಕರನ್ನು ಗುರುತಿಸಿ ಕೂಡಲೇ ಪರ್ಯಾಯ ವ್ಯವಸ್ಥೆಯೊಂದಿಗೆ ಗೌರವಿಸುವುದು, ಸೂಕ್ತ ಎಂದು ಜ್ಞಾನಿಗಳು ಹೇಳುತ್ತಿದ್ದರು