ಕನ್ನಡ ಜ್ಯೋತಿ ರಥಯಾತ್ರೆ ಯಶಸ್ವಿಗೆ ಕಸಾಪ ಅಭಿನಂದನೆಗಳು


ಮಂಗಳೂರು :ನವೆಂಬರ್ 7 ರಿಂದ 9ರ  ವರೆಗೆ ನಮ್ಮ ಜಿಲ್ಲೆಯ ಎಂಟು ತಾಲ್ಲೂಕು ಮತ್ತು ಕೇರಳ ಗಡಿನಾಡ ಘಟಕ ಮಂಜೇಶ್ವರ ಗಳಲ್ಲೂ ಕನ್ನಡ ಜ್ಯೋತಿ ರಥಯಾತ್ರೆ ನಡೆಯಿತು. ಅತ್ಯಂತ ಅರ್ಥ ಪೂರ್ಣವಾಗಿ ನಡೆಯಲು ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ, ಪುರಸಭೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಮಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿಗಳು, ಕನ್ನಡಪರ ಮನಸ್ಸುಗಳು,  ನಿಗಮ ಮಂಡಳಿಯ ಅಧ್ಯಕ್ಷರು, ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಸೇರಿದಂತೆ  ಪತ್ರಕರ್ತರು, ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಭಾಗವಹಿಸಿದ್ದರು. ಎಲ್ಲರನ್ನೂ ಒಳಗೊಂಡು ಯಶಸ್ವಿ ಯಾಗಿ ಕನ್ನಡ ರಥಯಾತ್ರೆ  ನೆರವೇರಿತು. ಸಹಕರಿಸಿದ ಎಲ್ಲರಿಗೂ ದಕ್ಷಿಣ  ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ ಅವರು ಧನ್ಯವಾದ ತಿಳಿಸಿದ್ದಾರೆ.*