ಗಡಿನಾಡ ಸಾಧಕ ಡಾ.ಹಾಜಿ. ಎಸ್ ಅಬೂಬಕರ್ ಆರ್ಲಪದವು ರವರಿಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ.

ಬೆಂಗಳೂರು: ಕರ್ನಾಟಕ ನಾಮಕರಣದ ಸುವರ್ಣ ವರ್ಷಾಚರಣೆಯ ನಿಮಿತ್ತವಾಗಿ ಬೆಳಗಾವಿ ಕಸ್ತೂರಿ ಸಿರಿಗನ್ನಡ ವೇದಿಕೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಧಕರನ್ನು ಗುರುತಿಸಿ ನೀಡಲ್ಪಡುವ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರಕ್ಕೆ ಗಡಿನಾಡ ಸಾಧಕ ಬಹುಮುಖ ಪ್ರತಿಭೆ ಡಾ.ಹಾಜಿ.ಯಸ್.ಅಬೂಬಕರ್ ಆರ್ಲಪದವು ಇವರನ್ನು ಆಯ್ಕೆ ಮಾಡಲಾಗಿದೆ.


ಸಾಹಿತ್ಯ ಭಾಷೆ ನೆಲ ಜಲ ನಾಡು ನುಡಿ ಮೊದಲಾದ ಕ್ಷೇತ್ರಗಳಲ್ಲಿ ಹಾಗೂ ಗಡಿನಾಡ ಕ್ಷೇತ್ರ ದಲ್ಲಿ ಮಾಡಿದ ಗಣನೀಯ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಈ ಆಯ್ಕೆ ಮಾಡಲಾಗಿದೆ ಅಬೂಬಕರ್ ಆರ್ಲಪದವು ರವರು ವಿವಿಧ ಸಂಘ ಸಂಸ್ಥೆಗಳ ಸ್ಥಾಪಕರಾಗಿ, ಪದಾಧಿಕಾರಿಗಳಾಗಿ, ಅನೇಕ ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿರುವರು. ಎಂದು ಬೆಳಗಾವಿ ಕಸ್ತೂರಿ ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾದ ಪ್ರೊ.ಎಲ್.ಎಚ್.ಪೆಂಡಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.