ಬಳಿಕ ಆತನೂ ಕೂಡ ಮುಲ್ಕಿಯ ಬೆಳ್ಳಾಯರು ಬಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸೊಸೆ-ಮೊಮ್ಮಗನ ಮೃತದೇಹ ಮನೆಯಲ್ಲಿದ್ದರೂ ಅರಿಯದ ಮಾವ
ಸೊಸೆ ಹಾಗೂ ಮೊಮ್ಮಗನ ಮೃತದೇಹ ಮನೆಯಲ್ಲಿದ್ದರೂ ಕೂಡ ವೃದ್ಧ ಅತ್ತೆ ಮಾವನಿಗೆ ಈ ವಿಚಾರ ಗೊತ್ತೆ ಆಗಿಲ್ಲ, ಕಾರ್ತಿಕ್ ಪತ್ನಿಗೆ ತನ್ನ ಮಾವ ಅತ್ತೆಯೊಂದಿಗೆ ಮನಸ್ತಾಪವಾಗಿತ್ತು. ಈ ಕಾರಣದಿಂದಾಗಿ ಮನೆಯ ಕೋಣೆಯಲ್ಲಿ ಕಾರ್ತಿಕ್ ಹಾಗೂ ಪತ್ನಿ ಪ್ರಿಯಾಂಕ ಪ್ರತ್ಯೇಕವಾಗಿದ್ದರು. ಇಡೀ ದಿನ ಮನೆಯ ಕೋಣೆಯಲ್ಲೇ ಕಾರ್ತಿಕ್ ಕುಟುಂಬ ಇತ್ತು. ತಂದೆ ಇಲ್ಲದ ಸಮಯ ನೋಡಿಕೊಂಡು ಪತ್ನಿ ಹಾಗೂ ಮಗುವನ್ನು ಕಾರ್ತಿಕ್ ಭಟ್ ಹತ್ಯೆ ಮಾಡಿದ್ದಾನೆ.
ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಕಾರ್ತಿಕ್ ಭಟ್
ಪಕ್ಷಿಕೆರೆ ಜಂಕ್ಷನ್ ನಲ್ಲಿ ಹೋಟೆಲ್ ನಡೆಸಿಕೊಂಡಿರುವ ಕಾರ್ತಿಕ್ ತಂದೆ ಜನಾರ್ದನ ಭಟ್, ನಿನ್ನೆ ಬೆಳಗ್ಗೆಯೂ ಮನೆಯಿಂದ ಹೋಟೇಲ್‌ಗೆ ತೆರಳಿದ್ದರು. ಈ ವೇಳೆ ಕಾರ್ತಿಕ್ ಭಟ್ ಹೆಂಡತಿ-ಮಗುವನ್ನು ಹತ್ಯೆ ಮಾಡಿದ್ದಾನೆ. ಕೌಟುಂಬಿಕ ಸಮಸ್ಯೆಯಿಂದ ಇಡೀ ಕುಟುಂಬವನ್ನೇ ಕಾರ್ತಿಕ್ ಹತ್ಯೆ ಮಾಡಿದ್ದಾನೆ. ಚೂರಿಯಿಂದ ಇರಿದು ಹತ್ಯೆ ಮಾಡಿ ಬಳಿಕ ಮಧ್ಯಾಹ್ನ ರೈಲಿಗೆ ತಲೆ ಕೊಟ್ಟು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೌಟಂಬಿಕ ಕಹಲಕ್ಕೆ ಆತ್ಮಹತ್ಯೆ ಸಾಧ್ಯತೆ!
ಇನ್ನೂ ಕಾರ್ತಿಕ್ ತಂದೆ ಜನಾರ್ದನ್ ಮಾತ್ರ ನಿನ್ನೆ ರಾತ್ರಿಯೂ ಮಗ-ಸೊಸೆ ಮನೆಯ ಕೋಣೆಯಲ್ಲೇ ಇದ್ದಾರೆಂದು ಭಾವಿಸಿದ್ದರು. ಇಂದು ಬೆಳಗ್ಗೆ ಕೂಡ ಜನಾರ್ದನ್ ಅವರು ಎಂದಿನಂತೆ ಹೋಟೇಲ್‌ಗೆ ತೆರಳಿದ್ದರು. ಮಧ್ಯಾಹ್ನ ಕಾರ್ತಿಕ್ ಭಟ್ ವಿಳಾಸ ಹುಡುಕಿಕೊಂಡು ಪಕ್ಷಿಕೆರೆ ಯ ಮನೆಗೆ ಪೊಲೀಸರು ಬಂದಿದ್ದು, ಮನೆಯ ಕೋಣೆ ತೆರೆದಾಗ ಕಾರ್ತಿಕ್ ಪತ್ನಿ ಹಾಗೂ ಮಗುವಿನ ಮೃತದೇಹ ಕೂಡ ಪತ್ತೆಯಾಗಿದೆ. ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ಕಾರ್ತಿಕ್ ಭಟ್ ಕೌಟುಂಬಿಕ ಕಲಹದ ಕಾರಣದಿಂದ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಉಂಟಾಗಿದೆ.