Shiggaon Victory: ಅಲುಗಾಡಿದ ಬಿಜೆಪಿ ಭದ್ರಕೋಟೆ, ಕಾಂಗ್ರೆಸ್‌ ಶಿಗ್ಗಾವಿ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಭರ್ಜರಿ ಜಯ

ಬೆಂಗಳೂರು: ಬಹುನಿರೀಕ್ಷೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ 2024 ಫಲಿತಾಂಶ ಪ್ರಕಟವಾಗಿದೆ. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಲ್ಪಸಂಖ್ಯಾತ ನಾಯಕ ಯಾಸಿರ್ ಖಾನ್ ಪಠಾಣ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಹೀನಾಯ ಸೋಲಾಗಿದೆ.

ಈ ಮೂಲಕ ದಶಕಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಭದ್ರಕೋಟೆ ಅಲುಗಾಡಿದೆ.

BREAKING: ಕರ್ನಾಟಕ ಉಪ ಚುನಾವಣೆ: 3 ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಮುನ್ನಡೆ, ಬಿಜೆಪಿಗೆ ಆಘಾತ

ಬಿಜೆಪಿ ವಿರುದ್ಧ ನಿರಂತರವಾಗಿ ಸೋಲುಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅವರು ಮರಳಿ ಯತ್ನ ಮಾಡಿದ್ದರ ಫಲವಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಕಳೆದ ಬಾರಿ ಅಪ್ಪ ಬಸವರಾಜ ಬೊಮ್ಮಾಯಿ ವಿರುದ್ಧ ಸೋತು, ಇದೀಗ ಪುತ್ರನ ವಿರುದ್ಧ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದಾರೆ.

ಶಿಗ್ಗಾವಿಯಲ್ಲಿ ಸತತ ಏಳನೇ ಸುತ್ತಿನಿಂದಲೇ ಯಾಸಿರ್ ಖಾನ್ ಪಠಾಣ್ ಅವರು ಮುನ್ನಡೆ ಸಾಧಿಸುತ್ತಾ ಬಂದರು. ಬೆಳಗ್ಗೆ 11.30 ಗಂಟೆವರೆಗೆ 75,780 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇತ್ತ ಭರತ್ ಬೊಮ್ಮಾಯಿ ಅವರು 67,784 ಮತಗಳಿಂದ ಹಿಂದುಳಿದಿದ್ದಾರೆ. ಒಟ್ಟಾರೆ ಶಿಗ್ಗಾವಿಯಲ್ಲಿ ಸುಮಾರು 09 ಸಾವಿರ ಮತಗಳ ಅಂತರದಿಂದ ಗೆಲ್ಲುವು ಪಡೆದುಕೊಂಡಿದ್ದಾರೆ. ಈ ಕುರಿತು ರಾಜ್ಯ ಚುನಾವಣೆ ಆಯೋಗದಿಂದ ಅಧಿಕೃತ ಮಾಹಿತಿ ಬರಬೇಕಿದೆ.

ಚನ್ನಪಟ್ಟಣ ಕ್ಷೇತ್ರ ಬಿಟ್ಟರೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರ ಕಾಂಗ್ರೆಸ್‌-ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಇದೀಗ ಇಲ್ಲಿ ಬಿಜೆಪಿಯು ಹಿಡಿತ ತಪ್ಪಿದ್ದು, ಕಾಂಗ್ರೆಸ್ ತನ್ನ ಭಾವುಟ ಹಾರಿಸಿ ಪ್ರಾಬಲ್ಯ ಸಾಧಿಸಲು ಸಜ್ಜಾಗಿದೆ. ಈ ಮೂಲಕ ಸತತ ಐದನೇ ಭಾರಿಗೆ ಶಿಗ್ಗಾವಿಯು ಬಿಜೆಪಿ ಪಾಲಾಗುವುದನ್ನು ಕಾಂಗ್ರೆಸ್ ತಪ್ಪಿಸುವಲ್ಲಿ ಯಶಸ್ವಿಯಾಗಿದೆ.

ಯಾಸಿರ್ ಖಾನ್ ಪಠಾಣ್ ಗೆ ಗೆಲುವು

ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಅವರಿಗೆ ಸೋಲಾಗುತ್ತಿದ್ದಂತೆ ಯಾಸಿರ್ ಖಾನ್ ಪಠಾಣ್ ಬೆಂಬಲಿಗರು, ಕಾರ್ಯಕರ್ತರ ಸಂಭ್ರಮು ಮುಗಿಲು ಮುಟ್ಟಿದೆ. ಕಾಂಗ್ರೆಸ್‌ ಭಾವುಟಗಳು ರಾರಾಜಿಸಿವೆ.

2008 ರಿಂದಲೂ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರೇ ಗೆದ್ದುಕೊಂಡು ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಐದನೇ ಭಾರಿಗೆ ಪುತ್ರ ಭರತ್ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದ್ದರು. ಆದರೆ ಅವರಿಗೆ ಅದೃಷ್ಟ ಕೈಕೊಟ್ಟಿದ್ದು, ಕಳೆದ ಬಾರಿ ಸೋತಿದ್ದ ಯಾಸಿರ್ ಖಾನ್ ಪಠಾಣ್ ಅವರು ಈ ಬಾರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಪ್ರಾಬಲ್ಯ ಅಂತ್ಯ ಕಂಡಿದೆ.

ಈ ಕ್ಷೇತ್ರದಲ್ಲಿ ವಿವಿಧ ಜಾತಿಗಳು ಸೇರಿದಂತೆ ಲಿಂಗಾಯತ ಮತಗಳು ಹೆಚ್ಚಿದ್ದು, ಅವರೇ ಮೊದಲಿಗರಾದರೆ, ನಂತರದ ಸ್ಥಾನದಲ್ಲಿ ಮುಸ್ಲಿಂ ಮತಗಳು ಹೆಚ್ಚಿವೆ. ಈ ಕಾರಣಕ್ಕೆ ಪಂಚಮಸಾಲಿ ನಾಯಕರನ್ನು ಕಣಕ್ಕಿಳಿಸಲು ಹುಡುಕಾಟ ನಡೆಸಿದ್ದ ಕಾಂಗ್ರೆಸ್ ಕೊನೆಗೆ ಆರನೇ ಬಾರಿಗೆ ಅಲ್ಪಸಮುದಾಯ ನಾಯಕರಿಗೆ ಮಣೆ ಹಾಕಿತು. ಉಪ ಚುನಾವಣೆ ಟಿಕೆಟ್ ನೀಡಿತು. ಒಟ್ಟಾರೆ ಕಾಂಗ್ರೆಸ್ ಪ್ಲಾನ್ ಉಪಚುನವಣೆ ಮಟ್ಟಿಗೆ ಸಕ್ಸಸ್ ಕಂಡಿದೆ.