ಕ್ರೆಡಿಟ್ ಸ್ಕೋರ್ 15 ದಿನಗಳಿಗೊಮ್ಮೆ ಅಪ್ಡೇಟ್ ಆಗುತ್ತೆ. ಈ ನಿಯಮ ಜನವರಿ 1, 2025 ರಿಂದ ಜಾರಿಗೆ ಬರುತ್ತೆ. ಕ್ರೆಡಿಟ್ ಸ್ಕೋರ್ ಅಪ್ಡೇಟ್ ಮಾಡಿಕೊಳ್ಳುವುದರಿಂದ ಸಾಲದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಬ್ಯಾಂಕುಗಳಿಗೆ ಸಹಾಯವಾಗುತ್ತೆ.
ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆ ಗ್ರಾಹಕರ ಕ್ರೆಡಿಟ್ ವರದಿ ನೋಡಿದರೆ, ಆ ಗ್ರಾಹಕರಿಗೆ ಮಾಹಿತಿ ಕಳಿಸಬೇಕು. ಇದನ್ನು SMS ಅಥವಾ ಇಮೇಲ್ ಮೂಲಕ ಕಳಿಸಬಹುದು.
ಯಾವುದೇ ಗ್ರಾಹಕರ ಸಾಲದ ಅರ್ಜಿ ತಿರಸ್ಕರಿಸಿದರೆ, ಅದಕ್ಕೆ ಕಾರಣ ತಿಳಿಸಬೇಕು. ಹೀಗಾಗಿ ಗ್ರಾಹಕರಿಗೆ ಸಾಲ ತಿರಸ್ಕಾರಕ್ಕೆ ಕಾರಣ ತಿಳಿಯುತ್ತದೆ.
ಸಾಲ ನೀಡುವ ಸಂಸ್ಥೆಗಳು ವರ್ಷಕ್ಕೊಮ್ಮೆ ಗ್ರಾಹಕರ ಸಂಪೂರ್ಣ ಕ್ರೆಡಿಟ್ ಸ್ಕೋರ್ ಉಚಿತವಾಗಿ ನೀಡಬೇಕು. ಈ ವರದಿ ಪಡೆಯಲು ಲಿಂಕ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಇರಬೇಕು.
ಸಾಲ ಮರುಪಾವತಿಸದಿದ್ದರೆ, ಖಾತೆ ಡೀಫಾಲ್ಟ್ ಆಗುತ್ತೆ ಅಂತ ಗ್ರಾಹಕರಿಗೆ ಮೊದಲೇ ತಿಳಿಸಬೇಕು. SMS ಅಥವಾ ಇಮೇಲ್ ಮೂಲಕ ತಿಳಿಸಬೇಕು.
Read more: JIO Electric Scooter : ಕೇವಲ 17 ಸಾವಿರ ರೂಪಾಯಿ ಗೆ ಜಿಯೋದಿಂದ ಜಿಯೋ 'ಎಲೆಕ್ಟ್ರಿಕ್ ಸ್ಕೂಟಿ!!?
ಸಾಲ ನೀಡುವ ಸಂಸ್ಥೆಗಳು ಗ್ರಾಹಕರ ದೂರುಗಳನ್ನು 30 ದಿನಗಳಲ್ಲಿ ಪರಿಹರಿಸಬೇಕು. ಇಲ್ಲದಿದ್ದರೆ, ತಡವಾದ ದಿನಕ್ಕೆ ₹100 ದಂಡ ಕಟ್ಟಬೇಕು.