ಮಹಿಳಾ ಧ್ವನಿ ಶ್ರೀಮತಿ ರಜನಿರಾಜ್ ಗೆ "ಪಂಚಶ್ರೀ ಪ್ರಶಸ್ತಿ:24

ಮಂಗಳೂರು: ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆಗಳನ್ನು ಖಂಡಿಸಿ, ಅದೆಷ್ಟೋ ಹೆಣ್ಣು ಮಕ್ಕಳ,ಮಹಿಳೆಯರ ಬಾಳಿನಲ್ಲಿ ಆತ್ಮವಿಶ್ವಾಸದ ಬೆಳಕನ್ನು ಮೂಡಿಸಿದ ರಾಜ್ಯ ಧ್ವನಿ ಮಹಿಳಾ ಮಕ್ಕಳ ಅಧ್ಯಕ್ಷೆ ಶ್ರೀಮತಿ ರಜನಿರಾಜ್ ಮಂಡ್ಯ ಅವರಿಗೆ ಮಂಡ್ಯದ ಕೆ.ಆರ್.ಪೇಟೆ ಪಂಚ ಭೂತೇಶ್ವರ ಸುಕ್ಷೇತ್ರ ಇದರ ದಶಮಾನೋತ್ಸವ ಅಂಗವಾಗಿ ಕೊಡಮಾಡುವ  "ಪಂಚಶ್ರೀ "ಪ್ರಶಸ್ತಿಯನ್ನು ದಶಂಬರ 15 ಆದಿತ್ಯವಾರ,ಮಂಡ್ಯದ ಕೆ.ಆರ್.ಪೇಟೆಯ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ, ಶ್ರೀ ರುದ್ರ ಮುನಿ ಸ್ವಾಮಿ ಹಾಗೂ ಕೆ.ಆರ್.ಪೇಟೆಯ ಶಾಸಕ ಮಂಜು ಅವರು ಪ್ರದಾನ ಮಾಡಿ ಶುಭಹಾರೈಸಿದರು.






ಕರ್ನಾಟಕ ಸರಕಾರದ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಮತಿ ರಜನಿರಾಜ್,ಧ್ವನಿ ಮಹಿಳಾ ಮಕ್ಕಳ ಸಂಘಟನೆಯ ರಾಜ್ಯಾಧ್ಯಕ್ಷರಾಗಿ, ಶೋಷಣೆ ದೌರ್ಜನ್ಯಗಳಿಂದ ನೊಂದ ಮಹಿಳೆಯರ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ ಸಂವಿಧಾನಾತ್ಮಕವಾಗಿ, ಕಾನೂನುಬದ್ಧವಾಗಿ,ಅದೆಷ್ಟೋ ಪ್ರಕರಣಗಳನ್ನು  ಪರಿಶೀಲಿಸಿ ನ್ಯಾಯನೀಡಿರುವ ಪ್ರಾಮಾಣಿಕ ಧೈರ್ಯವಂತ ಮಹಿಳೆ ಶ್ರೀಮತಿ ರಜನಿರಾಜ್ ಮಂಡ್ಯ.



ನೊಂದಮಹಿಳೆಯರ ನೋವು ದುಮ್ಮಾನಗಳನ್ನು ಆಲಿಸಿ ಅವರ ಮನೆಗೇ ಬಂದು ಸ್ಥಳೀಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ,ವಿವಿಧ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ನ್ಯಾಯ ಕೊಡಿಸಿ ನೊಂದವರ ಆಶಾಕಿರಣವಾಗಿರುವ ಶ್ರೀಮತಿ ರಜನಿರಾಜ್ ಮೇಡಂ "ಆಧುನಿಕ ನ್ಯಾಯ ಮಾತೆ."ಅವರ ಕೆಲಸ ಕಾರ್ಯಗಳನ್ನು ಪರಿಗಣಿಸಿ ಸ್ವಯಂ ಸೇವಾ ಸಂಘಗಳು,ವಿಶ್ವವಿದ್ಯಾನಿಲಯಗಳು, ರಾಜ್ಯ ರಾಷ್ಟ್ರ ಸರಕಾರಗಳು ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿ ಎಂದು ಆಶಿಸೋಣ.

✍️ ನಾರಾಯಣ ರೈ ಕುಕ್ಕುವಳ್ಳಿ.