ರಾಮನಗರ: ಸಾಲ ಕೊಡಿಸೋದಾಗಿ ಲಾಡ್ಜ್‌ಗೆ ಕರೆದ, ಅತ್ಯಾಚಾರ ಮಾಡಿ ವಿಡಿಯೋ ಮಾಡಿದ! ಬಿಜೆಪಿ ಮುಖಂಡ ಚೆಲುವರಾಮು ಬಂಧನ

ಸಾಲ‌ ಕೊಡಿಸುವುದಾಗಿ ಮಹಿಳೆಯನ್ನು ಲಾಡ್ಜ್ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಅತ್ಯಾಚಾರ ಎಸಗಿರುವ ಆರೋಪ ಬಿಜೆಪಿ ಮುಖಂಡನ ವಿರುದ್ಧ ಕೇಳಿಬಂದಿದ್ದು, ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು, ಬಿಜೆಪಿ ಮುಖಂಡನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ನಾಪತ್ತೆಯಾಗಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಮನಗರ: ಲೈಂಗಿಕ ಕಿರುಕುಳ ಆರೋಪ ಬಿಜೆಪಿ ಮುಖಂಡನ  ಬಂಧನ ಮಾಡಲಾಗಿದೆ. ಕನಕಪುರದ ಸಾತನೂರು ಪೊಲೀಸರು  ಬಿಜೆಪಿ ಮುಖಂಡ ಚಲುವರಾಮು Chaluvaramu ಎಂಬಾತನನ್ನು ಲೈಂಗಿಕ ಕಿರುಕುಳದ ಆರೋಪದಲ್ಲಿ ಬಂಧಿಸಿದ್ದಾರೆ.


ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸೂರನಹಳ್ಳಿಯ ಚಲುವರಾಮು ವಿರುದ್ಧ ವಿವಾಹಿತ ಮಹಿಳೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಗಂಭೀರ ಆರೋಪ ಮಾಡಿದ್ದಾರೆ.

ಸಾಲ ಕೊಡಿಸುವುದಾಗಿ ನಂಬಿಸಿ ಲಾಡ್ಜ್‌ಗೆ ಕರೆದು ಕಿರುಕುಳ

ಬ್ಯೂಟಿಷನ್ ಕೆಲಸ ಮಾಡಿಕೊಂಡಿದ್ದ ವಿವಾಹಿತ ಮಹಿಳೆಯನ್ನು ಲಾಡ್ಜ್ ಗೆ ಕರೆತಂದು ಹಲ್ಲೆ ನಡೆಸಿ ಬಳಿಕ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ರಾಮನಗರದ ಖಾಸಗಿ ಲಾಡ್ಜ್ ನಲ್ಲಿ ಕಿರುಕುಳ ನೀಡಿರುವುದಾಗಿ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಈತನ ಜೊತೆಗೆ ಇನ್ನೋರ್ವ ಆರೋಪಿ ರವಿ ಎಂಬಾತನ ವಿರುದ್ಧವೂ ದೂರು ದಾಖಲಾಗಿದ್ದು, ರವಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹಣ ಕೊಡಿಸುವುದಾಗಿ ಹೇಳಿ ಲೈಂಗಿಕ ಕಿರುಕುಳ!

ತನ್ನ ಗಂಡನ ಕಾಗದ ಪತ್ರ ಸರಿಪಡಿಸಲು ಹಣದ ಅವಶ್ಯಕತೆ ಇದ್ದು, ಚಲುವರಾಮು ಸಾಲ ಕೊಡಿಸುವುದಾಗಿ ಹೇಳಿ ಲಾಡ್ಜ್‌ಗೆ ಕರೆದಿದ್ದನಂತೆ, ಬಳಿಕ ಸಾಲ ಕೊಡುವವರು ಬರ್ತಾರೆ ಅಂತ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾಗಿ ಆರೋಪಿಸಿ ದೂರು ನೀಡಿದ್ದಾರೆ. ಸಾಲ ಕೊಡುವವರ ಕಚೇರಿ ಇಲ್ಲೇ ಇದೆ ಎಂದು ಮಹಿಳೆಗೆ ನಂಬಿಸಿದ್ದ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ.

ಬೆಳಗ್ಗೆ ಎಚ್ಚರವಾದಾಗ ಲಾಡ್ಜ್ ನಲ್ಲಿದ್ದ ಮಹಿಳೆ

ಮಾಸ್ಕ್ ಹಾಕಿ ಲಾಡ್ಜ್ ಕರೆದುಕೊಂಡು ಹೋಗಿದ್ದಾಗಿ ಆರೋಪಿಸಿದ್ದಾರೆ. ಲಾಡ್ಜ್ ನಲ್ಲಿ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಆರೋಪಿಸಿದ್ದಾರೆ. ಈ ವೇಳೆ ತಡೆಯೊಡ್ಡಿದ್ದಕ್ಕೆ ಕಪಾಳಕ್ಕೆ ಹೊಡೆದಿರುವುದಾಗಿ ಉಲ್ಲೇಖಿಸಿದ್ದಾರೆ. ಬಳಿಕ ಬೆಳಗ್ಗೆ ಎಚ್ಚರವಾದಾಗ ಲಾಡ್ಜ್ ನಲ್ಲಿ ಇರೋದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಗ್ನ ದೇಹ ತೋರಿಸುವಂತೆ ಕಿರುಕುಳ!

ಬಳಿಕ ವಿಡಿಯೋ ಕಾಲ್ ಮಾಡಿ ನಗ್ನ ದೇಹ ತೋರಿಸುವಂತೆ ಬೆದರಿಕೆ ಹಾಕಿದ್ದಾರೆ. ನಿನ್ನ ಬೆತ್ತಲೆ ವಿಡಿಯೋ ಇದೆ, ಎಲ್ಲಾ ಕಡೆ ಹಾಕ್ತೇನೆ ಅಂತ ಬೆದರಿಕೆ ಹಾಕಿರೋದಾಗಿ ಆರೋಪಿಸಿದ್ದಾರೆ. ಮಹಿಳೆಯ ದೂರಿನ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದು, ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಹಿಳೆ ನೀಡಿದ ದೂರಿನಲ್ಲೇನಿದೆ ಎನ್ನುವ ವಿವರ ಇಲ್ಲಿದೆ . 

ಸಾಲ ಕೊಡಿಸುವುದಾಗಿ ಹೇಳಿ ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೋರ್ವಳು ಬಿಜೆಪಿ ಮುಖಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬ್ಯೂಟಿಷನ್ ಕೆಲಸ ಮಾಡಿಕೊಂಡಿರುವ ವಿವಾಹಿತ ಮಹಿಳೆಗೆ ಸಾಲ ಕೊಡಿಸುವುದಾಗಿ ನಂಬಿಸಿ ರಾಮನಗರದ ಲಾಡ್ಜ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು. ಮಹಿಳೆ ನೀಡಿದ ಈ ದೂರಿನ ಮೇರೆಗೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸೂರನಹಳ್ಳಿಯ ಬಿಜೆಪಿ ಮುಖಂಡ ಚಲುವರಾಮು ಎನ್ನುವರನ್ನು ಸಾತನೂರು ಪೊಲೀಸರು ಬಂಧಿಸಿದ್ದಾರೆ.

ತನ್ನ ಗಂಡನ ಕಾಗದ ಪತ್ರ ಸರಿಪಡಿಸಲು ಹಣದ ಅವಶ್ಯಕತೆ ಇತ್ತು. ಆಗ ಸಾಲ‌ ಕೊಡಿಸುವುದಾಗಿ ಚಲುವರಾಮು ಭರವಸೆ ನೀಡಿದ್ದರು. ಬಳಿಕ ಸಾಲ ಕೊಡುವವರು ಬರುತ್ತಿದ್ದಾರೆ ಬನ್ನಿ ಎಂದು ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದು, ಸಾಲ ಕೊಡುವವರ ಕಚೇರಿ ಇಲ್ಲೇ ಇದೆ ಎಂದು ಹೇಳಿದ್ದ. ಬಳಿಕ ಮತ್ತು ಬರಿಸಿ ಲಾಡ್ಜ್​ನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ತಡೆಯೊಡ್ಡಿದ್ದಕ್ಕೆ ಕಪಾಳಕ್ಕೆ ಹೊಡೆದಿದ್ದಾಗಿ ಮಹಿಳೆ ದೂರಿದ್ದಾಳೆ.


ಅಲ್ಲದೇ ಬಳಿಕ ವಿಡಿಯೋ ಕಾಲ್ ಮಾಡಿ ನಗ್ನ ದೇಹ ತೋರಿಸುವಂತೆ ಬೆದರಿಕೆ ಹಾಕುತ್ತಿದ್ದ, ನಿನ್ನ ಖಾಸಗಿ ವಿಡಿಯೋ ಇದೆ. ಎಲ್ಲಾ ಕಡೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ಮಹಿಳೆ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಇದೀಗ ಸಾತನೂರು ಪೊಲೀಸರು, ಬಿಜೆಪಿ ಮುಖಂಡ ಚಲುವರಾಮು ಎನ್ನುವರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.