Simran singh news : Instagram ನಲ್ಲಿ ಸುಮಾರು ಏಳು ಲಕ್ಷ ಅನುಯಾಯಿಗಳನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಜನಪ್ರಿಯ ಸ್ವತಂತ್ರ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಗುರುಗ್ರಾಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷಾಂತರ ಅಭಿಮಾನಿಗಳಿಂದ RJ ಎಂದು ಕರೆಯಲ್ಪಡುವ ಸಿಮ್ರಾನ್ ಸಿಂಗ್, ಗುರುಗ್ರಾಮ್ ಸೆಕ್ಟರ್ 47 ಅಪಾರ್ಟ್‌ಮೆಂಟ್‌ನಲ್ಲಿ ಆಕೆಯ ಶವ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಕೆಯೊಂದಿಗೆ ವಾಸಿಸುತ್ತಿದ್ದ ಸ್ನೇಹಿತನೊಬ್ಬ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಆಕೆಯ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಪ್ರದೇಶದ ನಿವಾಸಿಯಾಗಿರುವ ಆಕೆಯನ್ನು ಅವರ ಅಭಿಮಾನಿಗಳು ʼಜಮ್ಮು ಕಿ ಧಡ್ಕನ್ (ಜಮ್ಮುವಿನ ಹೃದಯ ಬಡಿತ)ʼ ಎಂದು ಕರೆಯುತ್ತಿದ್ದರು. ಸಧ್ಯ ಸಿಮ್ರಾನ್ ಸಾವಿನ ಕುರಿತು ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನೇನು ಹೊರ ಬರಬೇಕಿದೆ.