BREAKING NEWS: ಚಿಕ್ಕಮಗಳೂರಲ್ಲಿ ಭೀಕರ ಕೊಲೆ : ತನ್ನ ಬಿಟ್ಟು ಗಂಡನ ಜೊತೆ ತೆರಳಿದಕ್ಕೆ ಗೃಹಿಣಿಯನ್ನು ಬರ್ಬರವಾಗಿ ಕೊಂದ ಪ್ರಿಯಕರ!

ಚಿಕ್ಕಮಗಳೂರು : ತನ್ನನ್ನು ಬಿಟ್ಟು ಮತ್ತೆ ಗಂಡನ ಜೊತೆ ಹೋಗಿದ್ದಕ್ಕೆ ಪ್ರಿಯಕರನೊಬ್ಬ, ಗೃಹಿಣಿಯೊಬ್ಬಳನ್ನು ಆಕೆಯ ಇಬ್ಬರು ಮಕ್ಕಳ ಮುಂದೆನೆ ಚಾಕುವಿನಿಂದ ಭೀಕರವಾಗಿ ಕೊಂದು, ಮನೆಯ ಹಿಂದೆ ಇರುವ ಕೃಷಿ ಹೊಂಡದಲ್ಲಿ ಮೃತ ದೇಹವನ್ನು ಎಸೆದು ಪರಾರಿಯಾಗಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಎನ್.

ಆರ್. ಪುರ ತಾಲೂಕಿನ ಕಿಚ್ಚೆಬ್ಬಿ ಗ್ರಾಮದಲ್ಲಿ ನಡೆದಿದೆ.

ಹೌದು ಚಿಕ್ಕಮಂಗಳೂರಿನ ಕಿಚಬ್ಬಿಯಲ್ಲಿ ಗೃಹಿಣಿಯ ಬರ್ಬರ ಹತ್ಯೆಯಾಗಿದೆ. ಕೊಲೆಯಾದ ಗೃಹಿಣಿಯನ್ನು ತೃಪ್ತಿ ಎಂದು ತಿಳಿದುಬಂದಿದೆ. ಎನ್ ಆರ್ ಪುರ ತಾಲೂಕಿನ ಕಿಚ್ಚಬಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಫೇಸ್ಬುಕ್ ಪ್ರಿಯಕರ ಚಿರಂಜೀವಿ ಎಂಬಾತನಿಂದ ಈ ಒಂದು ಭೀಕರ ಕೊಲೆ ನಡೆದಿದೆ. ಮನೆ ಒಳಗೆ ಕೊಂದು ಕೃಷಿಹೊಂಡಕ್ಕೆ ಮೃತ ದೇಹವನ್ನು ಎಸೆದಿದ್ದಾನೆ.

ತೃಪ್ತಿಗೆ ಫೇಸ್ಬುಕ್ ನಲ್ಲಿ ಚಿರಂಜೀವಿ ಪರಿಚಯವಾಗಿದ್ದ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿ, ತಿಂಗಳ ಹಿಂದೆಯೇ ಚಿರಂಜೀವಿ ಜೊತೆಗೆ ತೃಪ್ತಿ ಪರಾರಿಯಾಗಿದ್ದಳು. ಗಂಡನ ಬಿಟ್ಟು ಪ್ರಿಯಕರನ ಜೊತೆ ತೃಪ್ತಿ ಓಡಿ ಹೋಗಿದ್ದಳು. ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಳಿಕ ಪೊಲೀಸರು ತೃಪ್ತಿಯನ್ನು ಹುಡುಕಿ ವಿಜಯಪುರ ಜಿಲ್ಲೆಯಿಂದ ಕರೆದುಕೊಂಡು ಬಂದು ಸಂಧಾನ ನಡೆಸಿ ಗಂಡನ ಬಳಿಗೆ ಬಿಟ್ಟಿರುತ್ತಾರೆ. ಇದರಿಂದ ಕುಪಿತಗೊಂಡ ಪ್ರಿಯಕರ ಚಿರಂಜೀವಿ, ತನ್ನ ಬಿಟ್ಟು ಗಂಡನ ಜೊತೆ ತೆರಳಿದಕ್ಕೆ ಕೆರಳಿದ ಆತ ನೇರವಾಗಿ ತೃಪ್ತಿ ಮನೆಗೆ ಬಂದು ಆಕೆ ಮಕ್ಕಳೆ ಎದುರೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ಪೋಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.