ಪುತ್ತೂರು: ತಾಲ್ಲೂಕಿನ ಬಲ್ನಾಡು ಗ್ರಾಮದ ಬುಳೇರಿಕಟ್ಟೆ-ಸಾಜ ರಸ್ತೆಯ ಮಾಪಲೆಕೊಚ್ಚಿ ಎಂಬಲ್ಲಿನ ಏರ್‌ಟರಲ್ ಮೊಬೈಲ್ ಟವರ್‌ನಿಂದ ಬ್ಯಾಟರಿ ಕಳವು ಮಾಡಿದ್ದ ಪ್ರಕರಣದ ಆರೋಪಿಯನ್ನು ಸಿಪಿಐ ರವಿ ಬಿ.ಎಸ್.ನೇತೃತ್ವದ ಸಂಪ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಕಾವಳಮುಡೂರು ಗ್ರಾಮದ ವಗ್ಗ ನಿವಾಸಿ ಹರೀಶ್ ನಾಯ್ಕ (30) ಆರೋಪಿ.
ನ.19ರಂದು ಬ್ಯಾಟರಿ ಕಳವು ನಡೆದಿತ್ತು. ಘಟನೆಗೆ ಸಂಬಂಧಿಸಿ ಸಂಪ್ಯ ಠಾಣೆಗೆ ದೂರು ನೀಡಲಾಗಿತ್ತು. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದು, ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಟರಿ ಸೆಲ್ ಕಳವು ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯ ವಶದಲ್ಲಿದ್ದ ₹ 48ಸಾವಿರ ಮೌಲ್ಯದ 24 ಬ್ಯಾಟರಿ ಸೆಲ್ ಹಾಗೂ ಕಳವು ಮಾಡಲು ಬಳಸಿದ ₹ 2.50 ಲಕ್ಷ ಮೌಲ್ಯದ ಕಾರು, 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಸಂಪ್ಯ ಠಾಣೆ ಎಸ್‌ಐ ಜಂಬೂರಾಜ್ ಬಿ.ಮಹಾಜನ್, ತನಿಖಾ ವಿಭಾಗದ ಎಸ್‌ಐ ಸುಷ್ಮಾ ಜಿ.ಭಂಡಾರಿ, ಎಎಸ್‌ಐ ಮುರುಗೇಶ್ ಬಿ.ಎಚ್‌ಸಿಗಳಾದ ಪ್ರವೀಣ್ ಎನ್., ಹರೀಶ್ ಜಿ.ಎನ್., ಶರೀಫ್ ಸಾಬ್, ಕಾನ್‌ಸ್ಟೆಬಲ್‌ಗಳಾದ ಚಂದ್ರಶೇಖರ, ಶರಣಪ್ಪ ಪಾಟೀಲ್, ನಾಗೇಶ್ ಕೆ.ಸಿ., ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್, ಸಂಪತ್ ಕಾರ್ಯಾಚರಣೆ ತಂಡದಲ್ಲಿದ್ದರು.