ಡಾ. ಎ.ಡಿ. ಕೊಟ್ನಾಳ ಇವರಿಗೆ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ

ಬೆಂಗಳೂರು: ಶ್ರೀ ಮಹಾದೇವ ಎಜುಕೇಷನ್ ಆರ್ಟ್ & ಕಲ್ಚರಲ್ ಟ್ರಸ್ಟ್ (ರಿ.) ಬಳ್ಳಾರಿ  ಇದರ ಆಶ್ರಯದಲ್ಲಿ 69ನೇ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಸಾಧಕರಿಗೆ ನೀಡಲ್ಪಡುವ "ಕರ್ನಾಟಕ ಸಾಧಕ ರತ್ನ ಪ್ರಶಸ್ತಿ" ಗೆ ಡಾ.ಅಲ್ಲಾಭಕ್ಸ್ .ಡಿ. ಕೋಟ್ನಾಳ ಆಯ್ಕೆಗೊಂಡಿರುತ್ತಾರೆ ಹುಬ್ಬಳ್ಳಿಯ ಫಾರೆಸ್ಟ್ ಕಾಲನಿ ನಿವಾಸಿಯಾಗಿರುವ ಡಾ. ಕೊಟ್ನಾಳ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮಾಜಿ ಸದಸ್ಯರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದವೀಧರ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಗಳು, ಭಾರತೀಯ ಉದ್ಯೋಗ ವ್ಯಾಪಾರ ಮಂಡಳಿ, ದೆಹಲಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ವಿಶ್ವದರ್ಶನ ಕನ್ನಡ ದಿನಪತ್ರಿಕೆ ಮತ್ತು ಕರ್ನಾಟಕ ಪ್ರಜಾದರ್ಶನ ಮಾಸಿಕ ಪತ್ರಿಕೆಯ ಗೌರವ ಸಂಪಾದಕರಾಗಿದ್ದಾರೆ. ಭಾರತೀಯ ಕಿಸಾನ್ ಯುನಿಯನ್ (ಭಾನು) ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ ೩೦ ವರ್ಷಗಳಿಂದ ಶೈಕ್ಷಣಿಕ, ಕೃಷಿ, ಬೀಜೋತ್ಪಾದನೆ, ಬೀಜ ಸಂಸ್ಕರಣೆ ಮತ್ತು ಸಮಾಜ ಸೇವೆಯೊಂದಿಗೆ ರೈತ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮವಹಿಸಿ ದುಡಿಯುತ್ತಿದ್ದಾರೆ.




ಭಾರತ ಸರಕಾರ ವಾಣಿಜ್ಯ ಮಂತ್ರಾಲಯದ ಅಪೇಡಾ" ಸದಸ್ಯರಾಗಿ ಎರಡು ಅವಧಿಗೆ, ಭಾರತೀಯ ಆಹಾರ ನಿಗಮ (ಎಫ್‌ಸಿಐ)ದ ರಾಜ್ಯ ಸಲಹಾ ಸಮಿತಿ ಸದಸ್ಯರಾಗಿ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿರುವರು. ಇವರು ತನ್ನ ಜೀವನದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಯಾಗಿರುವ ಇವರು ಗೌರವ ಡಾಕ್ಟರೇಟ, ಸೇಂಟ ಮದರ್ ಥೆರೇಸಾ ವಿಶ್ವವಿದ್ಯಾಲಯದಿಂದ "ಜೀವಮಾನ ಸಾಧನೆ" ಪ್ರಶಸ್ತಿ ಅಂತ ರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಕರ್ನಾಟಕ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ಡಿ1 ಭಾನುವಾರದಂದು ಡಾ.ಜೋಳದರಾಶಿ ದೊಡ್ಡನ ಗೌಡರ ರಂಗಮಂದಿರ ಬಳ್ಳಾರಿ ಯಲ್ಲಿ ನಡೆದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಪೂಜ್ಯ ಶ್ರೀ ಷ.ಬ್ರ.ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಸಾನಿಧ್ಯದಲ್ಲಿ ಬಳ್ಳಾರಿ ಕಿಷ್ಕಿಂದ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ.ಯಶವಂತ ಭೂಪಾಲ್ ಅಧ್ಯಕ್ಷತೆಯಲ್ಲಿ ಡಾ.ಅಲ್ಲಾಭಕ್ಷ್ ಡಿ ಕೊಟ್ನಾಲ್ ರವರಿಗೆ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.