ಸರಕಾರಿ ರಜೆ : ಎಸ್.ಎಂ.ಕೃಷ್ಣ ನಿಧನ: ಮಂಗಳೂರು ವಿ.ವಿ ನಾಳೆ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ Govt Holiday


ಮಂಗಳೂರು: ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಮಂಗಳವಾರ (ಡಿ.10) ನಸುಕಿನ ಅಸುನೀಗಿದರು. ಕೆಲ ತಿಂಗಳಿನಿಂದ ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಎಸ್‌.ಎಂ.ಕೃಷ್ಣ ಅವರು ನಿಧನರಾದರು.


ಎಸ್.ಎಂ.ಕೃಷ್ಣ ನಿಧನದ ಕಾರಣದಿಂದ ಬುಧವಾರ (ಡಿ.11) ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ ಎಲ್ಲಾ ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ಬುಧವಾರ ರಜೆ ಇರಲಿದೆ.
ಸರ್ಕಾರಿ ರಜೆಯ ಕಾರಣದಿಂದ ಬುಧವಾರ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. 

ಈ ಪರೀಕ್ಷೆಯ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ವರದಿಯಾಗಿದೆ.
ಎಸ್.ಎಂ.ಕೆ ಅವರ ಅಂತ್ಯಕ್ರಿಯೆಯನ್ನು ಬುಧವಾರ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯಲ್ಲಿ ಸಕಲ ಗೌರವಗಳೊಂದಿಗೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.




ಪತ್ರಿಕಾ ಪ್ರಕಟಣೆ

ವಿಷಯ: ದಿನಾಂಕ 11.12.2024ರಂದು ನಡೆಯಬೇಕಾಗಿದ್ದ ಎಲ್ಲಾ ಸ್ನಾತಕ (UG) ಪದವಿ ಪರೀಕ್ಷೆಗಳ ಮುಂದೂಡಿಕೆ ಬಗ್ಗೆ

ಉಲ್ಲೇಖ: ಕರ್ನಾಟಕ ಸರಕಾರದ ಅಧಿಸೂಚನೆ ದಿನಾಂಕ : 10.12.2024.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದ ಆದೇಶದನ್ವಯ ದಿನಾಂಕ 11.12.2024ರಂದು ಸಾರ್ವಜನಿಕ ರಜೆಯನ್ನು ಘೋಷಿಸಿರುವುದರಿಂದ ಮಂಗಳೂರು ವಿಶ್ವವಿದ್ಯಾನಿಲಯವು ಸದರಿ ದಿನಾಂಕದಂದು ನಿಗದಿಪಡಿಸಿದ್ದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬದಲಾದ ಪರಿಷ್ಕತ ಪರೀಕ್ಷಾ ದಿನಾಂಕಗಳನ್ನು ಶೀಘ್ರದಲ್ಲಿ ಮುಂದೆ ತಿಳಿಸಲಾಗುವುದು.