ಬೆಂಗಳೂರು( ಬೆಳಗಾವಿ ಸುವರ್ಣ ವಿಧಾನಸೌಧ): ಆನೆಗಳಿಂದ ಕಾಡಿನಂಚಿನಲ್ಲಿರುವ ಜನರಿಗೆ ತೊಂದರೆ ಆಗುತ್ತಿದ್ದು, ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಬೇಡಿಕೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಕಟುವಾಗಿ ಟೀಕಿಸಿದರು.
‘ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ದುರದೃಷ್ಟಕರ’ ಎಂದು ಅವರು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು.
‘ಮನುಷ್ಯರಿಗೆ ಬದುಕುವ ಹಕ್ಕಿರುವಂತೆಯೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಧ್ವನಿಗೂಡಿಸಿದರು.
ಈ ವಿವಾದಾತ್ಮಕ ಹೇಳಿಕೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವಿರೋಧಗಳ ಕೇಳಿ ಬರುತ್ತಿತ್ತು ಇದೀಗ ಕಾಡುಗಳ್ಳ ವೀರಪ್ಪನ್ ಜೊತೆಗೆ ಪೂಂಜಪ್ಪನ್ ಎಂಬ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲಾಗದೊಡಗಿದೆ. ಈ ಹಿಂದೆ ಸುನ್ನತಿ ವಿಚಾರದಲ್ಲಿ ವಿವಾದತ್ಮಕ ಹೇಳಿಕೆ ನೀಡಿದಾಗ ಹರೀಶ್ ಪೂಂಜಾರ ಸುನ್ನತ್ ಮಾಡಿದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದವು. ಈಗ ಎರಡು ಚಿತ್ರಗಳು ಜೊತೆಗೂಡಿ ವೈರಳಾಗತೊಡಗಿದೆ.