ಕಡಬ: ಇಲ್ಲಿನ ದಾರ್ಮಿಕ ಮತ ಪಂಡಿತರೋರ್ವರ ಮೊಬೈಲ್ ವಾಟ್ಸಪ್ ಹ್ಯಾಕ್ ಆಗಿ ಅಶ್ಲೀಲ ಪೋಟೋಗಳು ಶೇರ್ ಆಗಿರುವ ಘಟನೆ ಇಂದು ವರದಿಯಾಗಿದೆ.
ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ತನ್ನ ಅರಿವಿಲ್ಲದೇ ತನ್ನ ಸಂಪರ್ಕದ ನಂಬರ್ ಗಳಿಗೆ ಅಶ್ಲೀಲ ಚಿತ್ರಗಳು ಶೇರ್ ಆಗಿರುವುದಾಗಿ ತಿಳಿಸಿರುತ್ತಾರೆ.
ಮಾತ್ರವಲ್ಲದೆ ಈ ಬಗ್ಗೆ ಕಡಬ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಒಂದು ಘಟನೆ ಎಲ್ಲರಿಗೂ ಮುಜುಗರ ಉಂಟಾಗುವಂತಾಯಿತು. ತಮ್ಮ ಮೊಬೈಲ್ ರೂಮಿನಲ್ಲಿ ಇರಿಸಿದ್ದರು. ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನೇತೃತ್ವ ವಹಿದಿದ್ದರು. ಈ ಸಂಧರ್ಭದಲ್ಲಿ ಅಶ್ಲೀಲ ಚಿತ್ರಗಳು ಶೇರ್ ಆಗಿದೆ ಎನ್ನಲಾಗಿದೆ.