ಕೋಲಾರ: ಕೋಲಾರದಲ್ಲಿ ನಡೆದ ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಶನ್ ಹಾಗೂ ಕೋಲಾರ ಜಿಲ್ಲೆ ಅಮೆಚೂರ್ ಅಸೋಸಿಯೇಶನ್ ಸಹಯೋಗದೊಂದಿಗೆ ನಡೆದ ಕರ್ನಾಟಕ ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೂನಿಯರ್ ಪ್ರಥಮ ಸ್ಥಾನವನ್ನು ಪಡೆದುಕೊಂಡು ಮುಂದಿನ ಹಂತಕ್ಕೆ ತೇರ್ಗಡೆ ಗೊಂಡಿದೆ.
ತಂಡದ ಮುಖ್ಯ( ಕೋಚ್)ತರಬೇತುದಾರರಾಗಿ ಮಾಜಿ ಖ್ಯಾತ ಕಬಡ್ಡಿ ಪಟು,"ಹಬೀಬ್ ಮಾಣಿ" ಹಾಗೂ ಆಸೀಫ್ ತಂಬೂತ್ತಡ್ಕ ನೇತೃತ್ವದಲ್ಲಿ ಹಾಗೂ ಜಿಲ್ಲಾ ತಂಡದ ಎಲ್ಲಾ ಆಟಗಾರರ ಅದ್ಭುತ ಹಾಗೂ ಅಮೋಘ ಯಶಸ್ವಿ ಪ್ರದರ್ಶನದ ಮೂಲಕ ಸೇರಿರುವ ಕಬಡ್ಡಿ ಪ್ರೇಕ್ಷಕರ ಗಮನ ಸೆಳೆಯುವ ಆಟವನ್ನು ಪ್ರದರ್ಶಿಸಿಸಿ ಜಿಲ್ಲಾ ಕಬಡ್ಡಿ ತಂಡವು ಅತ್ಯಂತ ಬಲಿಷ್ಠ ತಂಡವನ್ನು ಸೋಲಿಸುದರೊಂದಿಗೆ ಪತಾಕೆ ಹಾರಿಸಿ ತಮ್ಮ ಜಿಲ್ಲೆಗೆ ಕೀರ್ತಿ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.