ನಾಳೆ KSRTC ಅಧಿಕಾರಿ, ಸಿಬ್ಬಂದಿಗಳಿಗೆ ರಜೆ ಘೋಷಣೆ | KSRTC News


ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ನಿಧನ ಹಿನ್ನಲೆಯಲ್ಲಿ ನಾಳೆ ರಾಜ್ಯ ಸರ್ಕಾರದಿಂದ ಸರ್ಕಾರಿ ರಜೆ ಘೋಷಿಸಿ ಆದೇಶಿಸಿದೆ. ಈ ಕಾರಣದಿಂದಾಗಿ ಕೆ ಎಸ್ ಆರ್ ಟಿ ನಿಗಮಗಳ ಅಧಿಕಾರಿ, ಸಿಬ್ಬಂದಿಗಳಿಗೆ ನಾಳೆ ಸರ್ಕಾರಿ ರಜೆ ಘೋಷಿಸಿ ಆದೇಶಿಸಲಾಗಿದೆ.


ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದು, ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಅವರ ನಿಧನದ ಪ್ರಯುಕ್ತ ದಿವಂಗತರ ಗೌರವಾರ್ಥವಾಗಿ ರಾಜ್ಯಾಧ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ದಿನಾಂಕ 11-12-2024ರಂದು ಸಾರ್ವಜನಿಕ ರಜೆಯನ್ನು ಸರ್ಕಾರ ಘೋಷಿಸಲಾಗಿರುತ್ತದೆ ಎಂದಿದ್ದಾರೆ.

ಕೆ ಎಸ್ ಆರ್ ಟಿ ಸಿ ನಿಗಮದ ಕೇಂದ್ರ ಕಚೇರಿ, ವಿಭಾಗೀಯ ಕಚೇರಿಗಳು, ತರಬೇತಿ ಕೇಂದ್ರಗಳಿಗೆ ಅನ್ವಯಿಸುವಂತೆ ದಿನಾಂಕ 11-12-2024ರಂದು ರಜೆ ಘೋಷಿಸಲು ಸೂಕ್ತಾಧಿಕಾರಿಗಳು ಅನುಮೋದಿಸಿರುತ್ತಾರೆ. ಅದರಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.


ಇನ್ನೂ ಕೆ ಎಸ್ ಆರ್ ಟಿಸಿಯ ನಂತ್ರ ಇತರೆ ಸಾರಿಗೆ ನಿಗಮಗಳು ತಮ್ಮ ನಿಗಮದ ಅಧಿಕಾರಿ, ಸಿಬ್ಬಂದಿಗಳಿಗೆ ನಾಳೆ ರಜೆಯನ್ನು ಘೋಷಿಸಿ ಆದೇಶಿಸಿವೆ.