ಹೌದು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಹೊಸ ಗ್ರಾಹಕ ರಕ್ಷಣೆ ನಿಯಮಗಳನ್ನು ಪರಿಚಯಿಸಿದೆ. ಇದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲ ಆಗಲಿದೆ. ಇದು ಟೆಲಿಕಾಂ ನೀತಿಗಳಲ್ಲಿ ಹಲವಾರು ಹೊಸ ಗ್ರಾಹಕ ಸ್ನೇಹಿ ಬದಲಾವಣೆಗಳಿಗೆ ಮುನ್ನುಡಿ ಆಗುತ್ತದೆ. ಕೇವಲ ವಾಯ್ಸ್ ಕಾಲ್ ಮತ್ತು ಎಸ್ಎಮ್ಎಸ್ ಪ್ರಯೋಜನಗಳೊಂದಿಗೆ ಟಾರಿಫ್ ಪ್ಲ್ಯಾನ್ ಬಿಡುಗಡೆ ಮಾಡಲು ಅವಕಾಶ ನೀಡುತ್ತದೆ. ಈ ಮೂಲಕ ಟೆಲಿಕಾಂ ಕಂಪನಿಗಳ ಹಗಲು ದರೋಡೆಗೆ ಟ್ರಾಯ್ ಕಡಿವಾಣ ಹಾಕಿದಂತಾಗಿದೆ.
90 ದಿನಗಳ ಮಿತಿಯನ್ನು 365 ದಿನಗಳಿಗೆ ಹೆಚ್ಚಿಸಿ
ಗ್ರಾಹಕರಿಗೆ ಅನುಕೂಲವಾಗುವಂತೆ ಎಸ್‌ಟಿವಿ (ವಿಶೇಷ ಟಾರಿಫ್ ವೋಚರ್) ಮಿತಿಯನ್ನು 90 ದಿನಗಳಿಂದ 365 ದಿನಗಳವರೆಗೆ ಹೆಚ್ಚಿಸುವಂತೆ ಟ್ರಾಯ್ ಆದೇಶಿಸಿದೆ. ವಿಶೇಷವಾಗಿ ಟೆಲಿಕಾಂ ಕಂಪನಿಗಳಿಂದ ಎಸ್‌ಟಿವಿ ಪ್ಲ್ಯಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಮತ್ತು ಸಾಮಾನ್ಯ ಪ್ಲ್ಯಾನ್‌ಗಳಿಗಿಂತ ಅಗ್ಗವಾಗಿದೆ.ಇವು ಗ್ರಾಹಕರಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತವೆ. ಇದಲ್ಲದೆ, ಆಪರೇಟರ್‌ಗಳಿಗೆ ವಿವಿಧ ಮುಖಬೆಲೆಯ ಟಾಪ್ ಅಪ್ ವೋಚರ್‌ಗಳನ್ನು ಹೊಂದಲು ಟೆಲಿಕಾಂ ನಿಯಂತ್ರಣ ಸಂಸ್ಥೆ ಸೂಚಿಸಿದೆ. ಇದು ಕನಿಷ್ಠ 10 ರೂ. ನಿಂದ ಪ್ರಾರಂಭವಾಗಬೇಕು ಎಂದು ಟ್ರಾಯ್ ತಿಳಿಸಿದೆ.
150 ಮಿಲಿಯನ್ 2G ಬಳಕೆದಾರರಿಗೆ ಸಹಾಯ
ಟ್ರಾಯ್‌ನ ಹೊಸ ಗ್ರಾಹಕ ರಕ್ಷಣೆ ನಿಯಮಗಳಿಂದ ಸುಮಾರು 150 ಮಿಲಿಯನ್ 2G ಬಳಕೆದಾರರಿಗೆ ಮತ್ತು ಎರಡು ಸಿಮ್ ಕಾರ್ಡ್ ಹೊಂದಿರುವವರಿಗೆ ಸಹಾಯವಾಗುವ ನಿರೀಕ್ಷೆಯಿದೆ. ಇವುಗಳಲ್ಲಿ ಒಂದನ್ನು ವಾಯ್ಸ್ ಕಾಲ್‌ಗಳು ಮತ್ತು ಎಸ್ಎಮ್ಎಸ್ಗಾಗಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಗ್ರಾಹಕರು ತಾವು ಬಳಸುವ ಸೇವೆಗಳಿಗೆ ಮಾತ್ರ ಹಣ ಪಾವತಿಸಬೇಕಾಗಿದೆ.
ಟ್ರಾಯ್, ವೃದ್ಧರು ಹಾಗೂ ಮನೆಗಳಲ್ಲಿ ಬ್ರಾಡ್‌ಬ್ಯಾಂಡ್ ಹೊಂದಿರುವವರಿಗೆ ಇಂಟರ್‌ನೆಟ್‌ಗೆ ರೀಚಾರ್ಜ್ ಮಾಡಿಸುವ ಅವಶ್ಯಕತೆ ಇರದಿರುವುದನ್ನು ಗಮನಿಸಿದೆ. ಕೇವಲ ಕರೆ ಹಾಗೂ ಸಂದೇಶ ರವಾನೆಗೆಂದು ಪ್ರತ್ಯೇಕ ದರಪಟ್ಟಿ ತಯಾರಿಸಲು ಸೂಚಿಸಿದೆ. ಈ ಮೂಲಕ ಬಳಕೆದಾರರು ತಾವು ಬಳಸುವ ಸೇವೆಗಳಿಗಷ್ಟೇ ಹಣ ಪಾವತಿಸುವಂತಾಗುತ್ತದೆ. ವೌಚರ್‌ಗಳಿಗೆ ಯಾವುದೇ ಬೆಲೆಯನ್ನು ನಿಗದಿಪಡಿಸಲು ಅನುಮತಿಸಿರುವ ಟ್ರಾಯ್, 10 ರೂ. ರೀಚಾರ್ಜ್ ಕೂಪನ್ ಕೂಡ ಒದಗಿಸಬೇಕು ಎಂದು ಹೇಳಿದೆ.
ಗ್ರಾಹಕರು ಕೊಟ್ಟ ಹಣಕ್ಕೆ ಹೆಚ್ಚಿನ ಸೇವೆ
ಒಟ್ಟಾರೆ, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಕರೆ ದರಗಳು ಹಾಗೂ ಕರೆ ಡೇಟಾ ನಿಯಮಗಳನ್ನು ಬದಲಿಸಿದೆ. ಈ ಪ್ರಕಾರ ಡೇಟಾ ಬೇಡ ಕೇವಲ ಕರೆ - ಎಸ್‌ಎಂಎಸ್ ಪ್ಲ್ಯಾನ್ ಸಾಕು ಎಂದು ಬಯಸುವವರಿಗೆ ಪ್ರತ್ಯೇಕ ಯೋಜನೆ ಬಿಡುಗಡೆ ಮಾಡಲು ಸೂಚಿಸಿದೆ. ಟೆಲಿಕಾಂ ಪ್ರಾಧಿಕಾರವು ಗ್ರಾಹಕರ ಸಮೀಕ್ಷೆಗಳನ್ನು ಪರಿಗಣಿಸಿ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಗ್ರಾಹಕರು ತಾವು ನೀಡಿದ ಹಣಕ್ಕೆ ಹೆಚ್ಚಿನ ಸೇವೆಯನ್ನು ಪಡೆಯಲು ಸಹಾಯ ಮಾಡಲು ಈ ನಿಯಮಗಳನ್ನು ಮಾಡಿದೆ.
ಪ್ರಸ್ತುತ 2G ಗ್ರಾಹಕರರು ದುಬಾರಿ ಪ್ಲ್ಯಾನ್‌ಗಳನ್ನು ಪಡೆಯಬೇಕಿದೆ. ಇದು ಅವರಿಗೆ ಯಾವುದೇ ಪ್ರಯೋಜನವಿಲ್ಲದ ಡೇಟಾ ಪ್ಲ್ಯಾನ್ ಆಗಿದೆ. 2G ನೆಟ್‌ವರ್ಕ್‌ಗಳನ್ನು ನೀಡುವ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಎರಡರ ಮೇಲೂ ಪರಿಣಾಮ ಬೀರಲಿದೆ. ಆದರೆ, ಜಿಯೋ 4G ಅಥವಾ 5G ನೆಟ್‌ವರ್ಕ್‌ಗಳನ್ನು ಮಾತ್ರ ನೀಡುತ್ತದೆ.