ಚೆನ್ನೈ : ತಮಿಳು ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್ ಅವರು ಬಿ.ಆರ್. ಅಂಬೇಡ್ಕರ್ ಕುರಿತು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕುರಿತು ಪೋಸ್ಟ್ ಮಾಡಿರುವ ನಟ ವಿಜಯ್ ಕೆಲವು ವ್ಯಕ್ತಿಗಳಿಗೆ ಅಂಬೇಡ್ಕರ್ ಅವರ ಹೆಸರೆಂದರೆ "ಅಲರ್ಜಿ" ಇರಬಹುದು ಎಂದು ಹೇಳಿದ್ದಾರೆ.
ಎಲ್ಲಾ ಭಾರತೀಯ ನಾಗರಿಕರಿಗೆ ಸ್ವಾತಂತ್ರ್ಯದ ಮನೋಭಾವವನ್ನು ಪ್ರತಿನಿಧಿಸುವ "ಅಪ್ರತಿಮ ರಾಜಕೀಯ ಮತ್ತು ಬೌದ್ಧಿಕ ವ್ಯಕ್ತಿತ್ವ" ಅಂಬೇಡ್ಕರ್ ಎಂದು ಅವರು ಶ್ಲಾಘಿಸಿದ್ದಾರೆ.
ಅಂಬೇಡ್ಕರ್ ಅವರು ಪರಂಪರೆಯು ಅಂಚಿನಲ್ಲಿರುವ ಸಮುದಾಯಗಳಿಗೆ ಭರವಸೆಯ ಬೆಳಕು ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧ ಪ್ರತಿರೋಧದ ಸಂಕೇತವ ಎಂದು ವಿಜಯ್ ಒತ್ತಿ ಹೇಳಿದರು. ಅವರು ಅಂಬೇಡ್ಕರ್ ಅವರ ಹೆಸರನ್ನು ನಿರಂತರವಾಗಿ ಜಪಿಸುವುದಾಗಿ ವಿಜಯ್ ತಿಳಿಸಿದ್ದಾರೆ.
"ಅಂಬೇಡ್ಕರ್ ... ಅಂಬೇಡ್ಕರ್ ... ಅಂಬೇಡ್ಕರ್ ... ಅವರ ಹೆಸರನ್ನು ನಮ್ಮ ಹೃದಯದಲ್ಲಿ ಮತ್ತು ನಮ್ಮ ತುಟಿಗಳಲ್ಲಿ ಸಂತೋಷದಿಂದ ಜಪಿಸೋಣ" ಎಂದು ಟಿವಿಕೆ ಅಧ್ಯಕ್ಷ, ನಟ ವಿಜಯ್ ಪ್ರತಿಪಾದಿಸಿದ್ದಾರೆ.