ನವದೆಹಲಿ : ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ ಕುರಿತು ವಿಡಿಯೋ ಪೋಸ್ಟ್ ಮಾಡಿದ್ದ ಕೈ ನಾಯಕರಿಗೆ ಎಕ್ಸ್ ಸಂಸ್ಥೆಯಿಂದ ನೋಟಿಸ್ ಜಾರಿಯಾಗಿರುವ ಬಗ್ಗೆ ವರದಿಯಾಗಿದೆ.
'ಕೈ' ನಾಯಕರು ಅಮಿತ್ ಶಾ ಅವರ ವಿಡಿಯೋವನ್ನ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದ ಬೆನ್ನಲ್ಲೇ ಎಕ್ಸ್ ಖಾತೆಗಳಿಗೆ ನೋಟಿಸ್ ಬಂದಿದೆ ಎಂದು ಹಲವು ಕಾಂಗ್ರೆಸ್ ನ ನಾಯಕರು ಆರೋಪಿಸಿದ್ದಾರೆ.
ಎಕ್ಸ್ ಖಾತೆ ಹ್ಯಾಂಡಲ್ ಮಾಡುತ್ತಿರುವ ಅಡ್ಮಿನ್ ಗಳಿಗೆ ನೋಟಿಸ್ ನೋಟಿಫಿಕೇಶನ್ ಬಂದಿದ್ದು, ಇದು ಕೈ ನಾಯಕ ಕೆಂಗಣ್ಣಿಗೆ ಗುರಿಯಾಗಿದೆ.
ಮಂಗಳವಾರ ಅಮಿತ್ ಶಾ ಮಾತಾಡುವ ವೇಳೆ ಸಂವಿಧಾನವನ್ನ ಕಾಂಗ್ರೆಸ್ ವೈಯಕ್ತಿಕ ಹಿತಾಸಕ್ತಿಗೆ 77 ಬಾರಿ ತಿದ್ದುಪಡಿ ಮಾಡಿತ್ತು ಎಂದು ಆರೋಪಿಸಿರುವ ವಿಡಿಯೋವನ್ನ ಕೈ ನಾಯಕರು ಎಲ್ಲೆಡೆ ಶೇರ್ ಮಾಡಿ ಹರಿಹಾಯ್ದಿದ್ದರು.