ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ


ಪಾಣಾಜೆ: ಕರ್ನಾಟಕ ಶಿಕ್ಷಣ ಮಂಡಳಿ ನಡೆಸಿದ 2024-2025 ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ ಲಭಿಸಿರುತ್ತದೆ. ಹೈಯರ್ ಗ್ರೇಡ್ ಪರೀಕ್ಷೆಗೆ ಹಾಜರಾದ ಒಟ್ಟು 12 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೆರ್ಗಡೆಯಾಗಿರುತ್ತಾರೆ. ಸಿಂಚನ ಎಸ್, ಜಿತೇಶ್ ಮತ್ತು ಶಝಾನ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು.
 ಲೋಯರ್ ಗ್ರೇಡ್ ಪರೀಕ್ಷೆಗೆ ಹಾಜರಾದ ಒಟ್ಟು 9 ವಿದ್ಯಾರ್ಥಿಗಳೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಾಲೆಗೆ 100 ಶೇಕಡಾ ಫಲಿತಾಂಶ ಲಭಿಸಿರುತ್ತದೆ ಎಂದು ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ ತಿಳಿಸಿರುತ್ತಾರೆ. ವಿದ್ಯಾರ್ಥಿಗಳಿಗೆ ಶಾಲಾ ಚಿತ್ರಕಲಾ ಶಿಕ್ಷಕಿ ಶ್ರೀಮತಿ ಶಾರದಾ ಜಿ ಮಾರ್ಗದರ್ಶನ ನೀಡಿರುತ್ತಾರೆ.