ಬೆಳ್ತಂಗಡಿ: ಕೊಕ್ಕಡ ಪಟ್ಟೂರೂ,ಅಡ್ಡ್ಯೆ , ಯಲ್ಲಿ ನಡೆಯುತ್ತಿರುವ ಸಂಸ್ಥೆಯಾದ ಹಸನಿಯ್ಯಾ ಚಾರಿಟೇಬಲ್ ಎಜುಕೇಶನಲ್ ಸೆಂಟರ್‌ನಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಜ್ಮೀರ್ ಆಂಡ್ ನೇರ್ಚೆ ಆಧ್ಯಾತ್ಮಿಕ ಮಹಾ ಸಂಗಮ ಇದೆ ಬರುವ ಜನವರಿ ತಿಂಗಳ 12 ಆದಿತ್ಯವಾರದಂದು ನಡೆಯಲಿದೆ
ಬೆಳಿಗ್ಗೆ ಸರಿಯಾಗಿ 7 :00 ಗೆ ಬದ್ರಿಯಾ ಜುಮಾ ಮಸ್ಜಿದ್ ಪಟ್ಟೂರ್ ಮಸೀದಿಯ ಅಧ್ಯಕ್ಷರಾದಂತಹ ಉಮರ್ ಹಾಜಿ ಧ್ವಜಾರೋಹನವನ್ನು ನೆರವೇರಿಸಲಿದ್ದಾರೆ
ಮಗ್ರಿಬ್ ನಮಾಜಿನ ಬಳಿಕ ಅಜ್ಮೀರ್ ಆಂಡ್ ನೇರ್ಚೆ ನಡೆಯಲಿದ್ದು ಈ ಪ್ರಸ್ತುತ ವೇದಿಕೆಯನ್ನು ಸ್ವಾಗತವನ್ನು ಬಹು : ಬದ್ರುದ್ದೀನ್ ಅಹ್ಸನಿ ಖಾಮಿಲ್ ಸಖಾಫಿ ಮಾಡಲಿದ್ದಾರೆ
ಸಂಸ್ಥೆಯ ಮುಖ್ಯಸ್ಥರಾದ ಬಹು: ಶಾಫಿ ಸಖಾಫಿ ಅಲ್ ಖಾಮಿಲ್ ಉಸ್ತಾದರು ಸಮಾರಂಭವನ್ನು ಉದ್ಘಾಟಿಸಿ ಪ್ರಭಾಷಣ ಮಾಡಲಿದ್ದಾರೆ
ಅಸ್ಸಯ್ಯಿದ್ ಶಿಹಾಬುದ್ದೀನ್ ಅಹ್ದಲ್ ಅಲ್ ಹಾಶೀಮಿ ತಂಙಳ್ ಮುತ್ತನೂರ್ ಕೇರಳ ಮುಖ್ಯ ಪ್ರಬಾಷಣ ಮಾಡಲಿದ್ದಾರೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಅಸ್ಸಯ್ಯಿದ್ ಇಸ್ಮಾಯಿಲ್ ಅಲ್-ಹಾದಿ ತಂಙಳ್ ಉಜಿರೆ
ಅಲ್ -ಹಾಜ್ ಉಸ್ತಾದ್ ಯೂಸುಫ್ ಸಖಾಫಿ ಆದೂರು
ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು
ಆಸೀಫ್ ಮುಈನಿ ಉಪ್ಪಿನಂಗಡಿ
ನೌಷಾದ್ ಸಖಾಫಿ ಕೊಕ್ಕಡ
ಮೊದಲಾದ ಹಲವಾರು ಗಣ್ಯರು ಭಾಗವಹಿಸುವವರು ಎಂದು ತಿಳಿಸಿದ್ದಾರೆ