ನಿನ್ನೆ ಮಧ್ಯಾಹ್ನ 1.10ಕ್ಕೆ ಕೋಟೆಕಾರು ಸಹಕಾರಿ ಬ್ಯಾಂಕ್‌ಗೆ ನುಗಿದ್ದ ದರೋಡೆಕೋರರು ಕೇವಲ 5 ನಿಮಿಷದಲ್ಲಿ 4 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಮೂಟೆ ಕಟ್ಟಿಕೊಂಡು ಹೋಗಿದ್ದಾರೆ. ದರೋಡೆ ಆದ ಮೇಲೂ ತನಿಖೆಯ ಹಾದಿ ತಪ್ಪಿಸೋಕೆ ಇವರು ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ಕೋಟೆಕಾರು ಬ್ಯಾಂಕ್ ದರೋಡೆ ಮಾಡಲು ಈ ಗ್ಯಾಂಗ್ ಮೊದಲೇ ಸ್ಕೆಚ್ ಹಾಕಿಕೊಂಡು ಬಂದಿದ್ದಾರೆ. ಬ್ಯಾಂಕ್ ದರೋಡೆ ಮಾಡಿದವರು ಓರ್ವ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.
ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಸಿದು ಕೊಂಡು ಹೋದ ದರೋಡೆಕೋರರು ಮಂಗಳೂರು ಪೊಲೀಸರು ನಮ್ಮನ್ನ ಟ್ರ್ಯಾಕ್ ಮಾಡುತ್ತಾರೆ ಅನ್ನೋದು ಚೆನ್ನಾಗಿ ಗೊತ್ತಿದೆ. ಆ ಮೊಬೈಲ್ ಅನ್ನು ಪೊಲೀಸರು ಟ್ರ್ಯಾಕ್ ಮಾಡಿದಾಗ ಸ್ಫೋಟಕ ಮಾಹಿತಿ ಬಯಲಾಗಿದೆ. ಬ್ಯಾಂಕ್ ಸಿಬ್ಬಂದಿ ಮೊಬೈಲ್ ಕಿತ್ತುಕೊಂಡ ದರೋಡೆಕೋರರು ಇಡೀ ನಗರ ಸುತ್ತಿ, ಕದ್ರಿ ರಸ್ತೆ ಬಳಿ ಮೊಬೈಲ್ ಎಸೆದು ಪರಾರಿ ಆಗಿದ್ದಾರೆ. ಪೊಲೀಸರ ತನಿಖೆಯ ಹಾದಿ ತಪ್ಪಿಸೋಕ್ಕೆ ಈ ಕಿಲಾಡಿ ಪ್ಲಾನ್ ಮಾಡಿದ್ದಾರೆ. ಬ್ಯಾಂಕ್ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಿದ್ದ ಖದೀಮರಿಗೆ ಬ್ಯಾಂಕ್ ಸಿಬ್ಬಂದಿಯೇ ಶಾಮೀಲಾಗಿರುವ ಶಂಕೆಯೂ ವ್ಯಕ್ತವಾಗಿದೆ.
ಖದೀಮರ ಒಂದು ತಂಡ ಮೊಬೈಲ್ ಎಸೆದು ಪರಾರಿಯಾದ ಮೇಲೆ ಬಂಟ್ವಾಳ ರಸ್ತೆಯ ಮೂಲಕ ಕೇರಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೇರಳದ ಟೋಲ್ನಲ್ಲಿ ಕಾರು ಪಾಸ್ ಆಗಿರೋದು ಸದ್ಯ ಪತ್ತೆಯಾಗಿದೆ. ಮಂಗಳೂರು ಪೊಲೀಸರು ಇದೀಗ ಎರಡು ಕಾರುಗಳ ಬೆನ್ನು ಬಿದ್ದಿದ್ದಾರೆ. ಫಿಯೆಟ್ ಲಿನಿಯಾ ಕಾರಿನಲ್ಲಿ ಬಂದಿದ್ದ ಆರು ಮಂದಿ ಕಿನ್ಯಾ ರಸ್ತೆ ಮಾರ್ಗವಾಗಿ ಸಂಘದ ಎದುರು ಬಂದಿದ್ದಾರೆ. ಗೋಣಿಚೀಲದ ಜೊತೆಗೆ ಸಂಘಕ್ಕೆ ತೆರಳಿದ್ದಾರೆ. ಒಬ್ಬ ಮಾತ್ರ ಕಾರಿನ ಒಳಗೆ ಇದ್ದು, ಚೀಲ ತುಂಬಿಸಿಕೊಂಡು ವಾಪಸ್ ಬಂದ ಮೇಲೆ ಕಾರು ಹೊರಟಿದೆ. ಈ ದೃಶ್ಯವು ಪಕ್ಕದ ಗೋದಾಮಿನ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ನೋಂದಣಿ ಸಂಖ್ಯೆಯನ್ನು ಪೊಲೀಸರು ಪತ್ತೆ ಹಚ್ಚಿ, ಮಾಲೀಕನಿಗೆ ಕರೆ ಮಾಡಿದಾಗ ಅದು ನಕಲಿಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಕೃತ್ಯ ನಂತರ ಆರೋಪಿಗಳು ಕೇರಳದತ್ತ ಸಾಗಿದ್ದು, ತಲಪಾಡಿ ಟೋಲ್‌ಗೇಟ್‌ನಲ್ಲಿ ₹150 ಹಣ ಕೊಟ್ಟು ರಶೀದಿ ಪಡೆದುಕೊಂಡಿದ್ದಾರೆ. ನಂಬರ್ ಪ್ಲೇಟ್ ನಕಲಿಯಾಗಿದ್ದ ಕಾರಣ ಕಾರಿನಲ್ಲಿ ಫಾಸ್ಟಾಗ್ ಇರಲಿಲ್ಲ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಟೋಲ್ ಗೇಟ್ ನಲ್ಲಿ ಮಾಸ್ಕ್ ಹಾಕಿದ ವ್ಯಕ್ತಿಯಿಂದ ಟೋಲ್ ಶುಲ್ಕ ಪೇ ಮಾಡಿದ್ದಾನೆ. ಉಳಿದ ಒಬ್ಬ ಹಿಂದಿನ ಸೀಟ್ ನಲ್ಲಿ ಇದ್ದ ಬಗ್ಗೆ ಟೋಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.