ದುಬೈಯಲ್ಲಿ DKSC ವತಿಯಿಂದ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ





ಮಂಗಳೂರು: ದುಬೈ, ಸುಮಾರು 30 ವರ್ಷಗಳ ಕಾಲ UAE ಯಲ್ಲಿ ವಿವಿಧ ಕೆಲಸ ಕಾರ್ಯಗಳನ್ನು ಅಲಂಕರಿಸಿ, DKSC ಯ ಅಂಗವಾಗಿ ಕಾರ್ಯ ಪ್ರವೃತ್ತರಾಗಿದ್ದ ಮಜೀದ್ ಹಾಜಿ ಉಚ್ಚಿಲ ಇವರು ಸೇವಾ ನಿವೃತ್ತಿಗೊಂಡು ತಾಯ್ನಾಡಿಗೆ ಹೊರಡುತ್ತಿರುವ ಸಂದರ್ಭದಲ್ಲಿ DKSC ವತಿಯಿಂದ ಬೀಳ್ಕೊಡುಗೆ




 ಸಮಾರಂಭ ಹಾಗೂ ಹಲವಾರು ಸೇವಾ ಕ್ಷೇತ್ರದಲ್ಲಿ ದುಡಿಯುತ್ತಿದ್ದು ಇತ್ತೀಚಿಗೆ ಭಾರತ ಸೇವಾ ರತ್ನ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದು ಯುಎಇಗೆ ಆಗಮಿಸಿದ ಡಾ.ಹಾಜಿ ಎಸ್ ಅಬೂಬಕರ್ ಆರ್ಲಪದವು ಇವರಿಗೆ ಸನ್ಮಾನ ಸಮಾರಂಭವು ದೇರಾ ದುಬೈ ಯಲ್ಲಿರುವ DKSC ಯ ಅಧ್ಯಕ್ಷರಾದ ಹಾಜಿ ಎಂ ಇ ಮೂಳೂರು ಇವರ ನಿವಾಸದಲ್ಲಿ DKSC ಯ ಪದಾಧಿಕಾರಿಗಳ ಸಭೆಯಲ್ಲಿ ನಡೆಯಿತು ಈ ಸಂದರ್ಭದಲ್ಲಿ DKSCಯ ಅಧ್ಯಕ್ಷರಾದ ಎಂ ಇ ಮೂಳೂರು ತನ್ನ ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ ಈರ್ವರ ಕಾರ್ಯಕ್ಷೇತ್ರವನ್ನು ಶ್ಲಾಘಿಸಿದರು.


 ಪ್ರಧಾನ ಕಾರ್ಯದರ್ಶಿ ಯಸ್ ಯೂಸುಫ್ ಆರ್ಲಪದವು ಪ್ರಾಸ್ತಾವಿಕದೊಂದಿಗೆ ಸರ್ವರನ್ನು ಸ್ವಾಗತಿಸಿದರು. ನವಾಜ್ ಹಾಜಿ ಕೋಟೆಕಾರ್, ಶಾಕಿರ್ ಕಲ್ಲಡ್ಕ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಅಶ್ರಫ್ ಖಾನ ಆರ್ಲಪದವು ಬದ್ರಿಯಾ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಪಿ ಕೆ ಅಬೂಬಕರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು DKSCಯ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯಾ ಧನ್ಯವಾದಗಳನ್ನು ಸಮರ್ಪಿಸಿದರು