ಮಂಗಳೂರು: ಜಾಮಿಯಾ ಹಾಶಿಮೀಯ್ಯಾ ಅಲ್ ಇಸ್ಲಾಮೀಯ್ಯಾ ಇದರ ಇಪ್ಪತೈದನೇ ವಾರ್ಷಿಕೋತ್ಸವದ ಪ್ರಚಾರ ಸಂಗಮ ಜನವರಿ ಹನ್ನೆರಡರಂದು ಸುನ್ನೀ ಸೆಂಟರ್ ವಿದ್ಯಾನಗರ ಸುಳ್ಯದಲ್ಲಿ ನಡೆಯಲಿದೆ.
ಹಾಶಿಮೀಯ್ಯಾ ಪ್ರಧಾನ ಕಾರ್ಯದರ್ಶಿ ಶೈಖುನಾ ಬಾದ್ಶಾ ಸಖಾಫಿ ಉಸ್ತಾದ್ ಹಾಗೂ ಧಾರ್ಮಿಕ, ಸಾಮಾಜಿಕ ಮುಖಂಡ ಭಾಗವಹಿಸಲಿದ್ದಾರೆ.
ಜೊತೆಗೆ ಹಾಶಿಮೀಯ ದೌರತುಲ್ ಹದೀಸ್ ಒಂದು ವರ್ಷದ ಪ್ರವೇಶ ಪರೀಕ್ಷೆ ಸದರಿ ದಿನದಂದು ಮಧ್ಯಾಹ್ನ 2 ರಿಂದ ಸಂಜೆ 6ರ ತನಕ ನಡೆಯಲಿದೆ ಎಂದು ಹಾಶಿಮೀಯ್ಯಾ ಮುದರ್ರಿಸ್ ಜಾಬಿರ್ ಹಾಶಿಮಿ ಅಲ್ ಖಾದಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.