ಮಾತ್ರ. ದಾಖಲಾದ ದೂರಿನ ಪ್ರಕಾರ ಇನ್ನೂ 25 ಲಕ್ಷ ರೂ.ನಷ್ಟು ಮೊತ್ತ ವಸೂಲಾಗಬೇಕಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಘಟನೆ ನಡೆದ 20 ದಿನಗಳ ಬಳಿಕ ಮೊದಲ ಆರೋಪಿ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಕೇರಳದ ಕೊಲ್ಲಂ ಮೂಲದ ಅನಿಲ್ ಫೆರ್ನಾಂಡಿಸ್ ಎಂಬಾತನನ್ನು ಬಂಧಿಸಿದ್ದು, ಈ ವೇಳೆ 5 ಲಕ್ಷ ರೂ. ಹಾಗೂ ಒಂದು ಮಾರುತಿ ಎರ್ಟಿಗಾ ಕಾರನ್ನು ವಶಪಡಿಸಿಕೊಂಡಿದ್ದರು. ಅದರ ಬಳಿಕ ಒಂದು ಕಾರನ್ನು ವಶಪಡಿಸಿಕೊಂಡಿರುವುದು ಬಿಟ್ಟರೆ ಬೇರೆ ಯಾವುದೇ ರೀತಿಯ ನಗದು ವಸೂಲಾತಿ ಸಾಧ್ಯವಾಗಿಲ್ಲ.
ಪ್ರಕರಣದ ಮೂಲ ಸೂತ್ರಧಾರ ಕೇರಳದ ಎಎಸ್‌ಐ ಆಗಿದ್ದರೂ ಈತ ನಕಲಿ ಇ.ಡಿ. ದಾಳಿಯ ಸಂದರ್ಭ ಸ್ಥಳದಲ್ಲಿರಲಿಲ್ಲ. ಆತ ತನ್ನ ದರೋಡೆ ತಂಡಕ್ಕೆ ಸಂಪೂರ್ಣ ತರಬೇತಿ ನೀಡಿ ದಾಳಿಗೆ ಸಿದ್ಧಪಡಿಸಿದ್ದ. ಆದರೆ ದಾಳಿಗೆ ಮೊದಲು ಮಂಗಳೂರಿಗೆ ಆಗಮಿಸಿ ಮಾಲೊಂದರಲ್ಲಿ ತನ್ನ ತಂಡದ ದರೋಡೆಕೋರರ ಜತೆಗೆ ಸ್ಥಳೀಯರಿಗೆ ಮಾರ್ಗದರ್ಶನ ಮಾಡಿದ್ದ ಎನ್ನಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ ಬಂಧಿತರಾಗಿರುವ ಕೊಲ್ಲಂ ಮೂಲದ ಸಚಿನ್, ಶಬಿನ್ ಹಾಗೂ ಅನಿಲ್ ಫೆರ್ನಾಂಡಿಸ್ ನೇರ ಭಾಗಿಯಾಗಿದ್ದು, ಇನ್ನೂ ಮೂವರ ಬಂಧನ ಆಗಬೇಕಿದೆ. ಹೀಗಾಗಿ ಉಳಿದ ಮೊತ್ತ ಅವರ ಬಂಧನದ ಬಳಿಕವೇ ವಸೂಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಮತ್ತೆ ಜಿಲ್ಲಾ ಪೊಲೀಸ್ ತಂಡಗಳು ಕೇರಳದತ್ತ ಮುಖ ಮಾಡಿವೆ ಎನ್ನಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿ ಎಎಸ್‌ಐ
ಸೂತ್ರಧಾರ ಎಎಸ್‌ಐ ಶಫೀರ್ ಬಾಬುನನ್ನು ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ಬಂಧನದ ಬಳಿಕ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಹೀಗಾಗಿ ಉಳಿದ ಆರೋಪಿಗಳು ಕೆಲವೇ ದಿನಗಳಲ್ಲಿ ಸೆರೆಯಾಗುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ನಗದಿನ ಜತೆ ಉಳಿದವರಿಗೆ ಶೋಧ
ಬೋಳಂತೂರಿನ ದರೋಡೆ ಪ್ರಕರಣದಲ್ಲಿ ಪ್ರಸ್ತುತ ನಗದು 5 ಲಕ್ಷ ರೂ. ಮಾತ್ರ ರಿಕವರಿಯಾಗಿದ್ದು, ಆರೋಪಿ ಎಎಸ್‌ಐನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಹಣದ ರಿಕವರಿಯ ಜತೆಗೆ ಇತರ ಆರೋಪಿಗಳ ಪತ್ತೆಯ ನಿಟ್ಟಿನಲ್ಲೂ ಪೊಲೀಸ್ ತನಿಖೆ ಮುಂದುವರಿದಿದೆ.
-ಯತೀಶ್ ಎನ್., ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.