ಶ್ರೀಕಾಂತ್, ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್., ನೇತಾರರಾದ ಸುನಿಲ್ ಪಿ.ಆರ್, ಜಯ ಕುಳದಪಾರೆ ಸಹಿತ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸು ತ್ತಿದ್ದಾರೆ. ಚಿರತೆಯನ್ನು ಬೆಳ್ಳೂರು ಪಂಚಾಯತು ವ್ಯಾಪ್ತಿಯಲ್ಲಿ ಬಿಡಲಾ ಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಶ್ರೀಧರ ಬೆಳ್ಳೂರು ತಿಳಿಸಿದ್ದಾರೆ.
ಜಿಲ್ಲಾ ಅರಣ್ಯ ಅಧಿಕಾರಿ ಬಂದು ಉತ್ತರ ಹೇಳುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ.
ಕೊಳತ್ತೂರಿನ ಖಾಸಗಿ ವ್ಯಕ್ತಿಯ ಹಿತ್ತಲಿನಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸಿಲುಕಿಕೊಂಡ ಚಿರತೆ ಯನ್ನು ರಾತ್ರಿಯೇ ಅರಣ್ಯದಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಅದು ಎಲ್ಲಿ ಬಿಡಲಾಗಿದೆ ಎಂದು ತಿಳಿಸುತ್ತಿಲ್ಲ. ಈ ಮಧ್ಯೆ ಸೋಮವಾರ ಮುಂಜಾನೆ 3.30ಕ್ಕೆ ಅರಣ್ಯ ಇಲಾಖೆಯ ವಾಹನಗಳು ಮುಳ್ಳೇರಿಯ, ನಾಟೆಕಲ್ಲು, ನೆಟ್ಟಣಿಗೆ ,ಕಿನ್ನಿಂಗಾರು ದಾಟಿ ಮುಂದೆ ಸಾಗಿದೆ. ಬೆಳಗ್ಗೆ 6.40ಕ್ಕೆ ಈ ವಾಹನಗಳು ಮುಳ್ಳೇರಿಯ ಭಾಗಕ್ಕೆ ಮರಳಿದ್ದು, ಜಾಂಬ್ರಿ ಪ್ರದೇಶದಲ್ಲೆಲ್ಲೊ ಚಿರತೆಯನ್ನು ಬಿಟ್ಟಿರ ಬೇಕು ಎಂದು ಶಂಕಿಸಲಾಗಿದೆ. ಕೇರಳ – ಕರ್ನಾಟಕ ಗಡಿ ಪ್ರದೇಶದ ಬಂಟಾಜೆ ರಕ್ಷಿತಾರಣ್ಯದಲ್ಲಿ ಚಿರತೆಯನ್ನು ಬಿಡ ಲಾಗಿದೆ ಎಂಬ ವದಂತಿ ಇದೆ. ಶಾಸಕ ಎನ್.ಎ.ನೆಲ್ಲಿಕುನ್ನು ಆಗಮಿಸಿ ಮಾಹಿತಿ ಪಡೆದುಕೊಂಡರು.