Budget 2025: ನಿಮಗಾಗಿ 2025ರ ಬಜೆಟ್ ತಂದ ಗುಡ್‌ ನ್ಯೂಸ್‌, ಇನ್ಮುಂದೆ ಔಷಧಿಗಳು, ಮೊಬೈಲ್ ಫೋನ್, ಮೆಡಿಕಲ್ ಉಪಕರಣಗಳು, ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಇಳಿಕೆ...!!!?

ಬೆಂಗಳೂರು: ಬಾರಿಯ ಬಜೆಟ್‌ನಲ್ಲಿ  2025 ನಿರ್ಮಲಾ ಸೀತಾರಾಮನ್  ಸಾಕಷ್ಟು ಮಹತ್ವದ ಯೋಜನೆಗಳು, ಘೋಷಣೆಗಳನ್ನು ಮಾಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ವಸ್ತುಗಳ ಬೆಲೆ ಕಡಿಮೆಯಾಗುವುದರ ಬಗ್ಗೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.






ಜನಸಾಮಾನ್ಯರು ಪ್ರತಿ ಬಾರಿ ಬಜೆಟ್ ಮಂಡನೆಯಾದಗಲೂ ಯಾವುದೆಲ್ಲ ಬೆಲೆ ಕಡಿಮೆಯಾಯ್ತು (Price Cut) ಅಂತ ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿಯೂ ಸಾಕಷ್ಟು ವಸ್ತುಗಳ ಬೆಲೆ ಕಡಿಮೆಯಾಗಿದೆ. ಎಲ್‌ಇಡಿ, ಎಲ್‌ಸಿಡಿ ಟಿವಿಗಳ ಬೆಲೆ (TV Price Down) ಇಳಿಕೆಯಾಗಲಿದೆ.







ಇನ್ಮುಂದೆ ಇವುಗಳ ಬೆಲೆ ಇಳಿಕೆ!

  1. LED, LCD ಟಿವಿಗಳು

  2. ಚರ್ಮದ ಉತ್ಪನ್ನಗಳು

  3. ಕೋಬಾಲ್ಟ್‌

  4. ಝಿಂಕ್‌

  5. ಸ್ವದೇಶಿ ಬಟ್ಟೆಗಳು

  6. ಇವಿ ಬ್ಯಾಟರಿ

  7. ಮೊಬೈಲ್‌ ಫೋನ್‌ಗಳು

  8. 36 ಕ್ಯಾನ್ಸರ್ ಔಷಧಿಗಳು

  9. ಜೀವ ರಕ್ಷಕ ಔಷಧಿಗಳು

  10. ವೈದ್ಯಕೀಯ ಉಪಕರಣಗಳು

  11. ಮೊಬೈಲ್ ಫೋನ್ ಬ್ಯಾಟರಿ

  12. ಲೆದರ್‌ ಶೂಗಳು

  13. ಲೆದರ್‌ ಬೆಲ್ಟ್‌ಗಳು

  14. EV ವಾಹನಗಳು




ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಳ!

ಈ ಬಜೆಟ್ ಜನ ಸಾಮಾನ್ಯರ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ನಿರ್ಮಲಾ ಸೀತಾರಾಮನ್‌ ಬಜೆಟ್ ಮಂಡನೆ ಆರಂಭದಲ್ಲೇ ಹೇಳಿದ್ದರು. ಇದಲ್ಲದೆ ದೇಶದ ಆರ್ಥಿಕತೆಯ ಬೆಳವಣಿಗೆ ದರವನ್ನು ಹೆಚ್ಚಿಸುತ್ತೆ ಅಂತ ಹೇಳಿದರು. ಬೆಳೆಯುತ್ತಿರುವ ಮಧ್ಯಮ ವರ್ಗದ ವೆಚ್ಚದ ಸಾಮರ್ಥ್ಯವನ್ನು ಹೆಚ್ಚಿಸುವುದು ಬಜೆಟ್‌ನ ಉದ್ದೇಶವಾಗಿದೆ ಎಂದು ಹೇಳಿದರು.







12 ಲಕ್ಷದವರೆಗೂ ಟ್ಯಾಕ್ಸ್ ಇಲ್ಲ ಇಲ್ಲ!

  ಬಜೆಟ್‌ 3.0ಹೊಸ ಟ್ಯಾಕ್ಸ್ ಲೆಕ್ಕಾಚಾರ!
0-4 ಲಕ್ಷ ರೂಪಾಯಿ ಆದಾಯ0 %
4 ರಿಂದ 8 ಲಕ್ಷ ರೂಪಾಯಿ5 %
8 ರಿಂದ 12 ಲಕ್ಷ ರೂಪಾಯಿ10 %
12 ರಿಂದ 16 ಲಕ್ಷ ರೂಪಾಯಿ15 %
16 ರಿಂದ 20 ಲಕ್ಷ ರೂಪಾಯಿ20 %
20 ರಿಂದ 24 ಲಕ್ಷ ರೂಪಾಯಿ25 %
24 ಲಕ್ಷಕ್ಕಿಂತ ಮೇಲ್ಪಟ್ಟ30 %






12.75 ಲಕ್ಷದವರೆಗೂ ತೆರಿಗೆ ಇಲ್ಲ!

ಇದರೊಂದಿಗೆ ₹75 ಸಾವಿರ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗಲಿರುವುದರಿಂದ, ಒಟ್ಟು ₹12,75,000 ವರೆಗಿನ ಆದಾಯವುಳ್ಳವರಿಗೆ ತೆರಿಗೆ ರಿಯಾಯಿತಿ ಲಭ್ಯವಾಗಲಿದೆ.ಆರಂಭದಲ್ಲಿ 2.5 ಲಕ್ಷ ಇದ್ದ ತೆರಿಗೆ ರಹಿತ ಸ್ವಾಬ್ ಅನ್ನು 2019ರಲ್ಲಿ ₹5 ಲಕ್ಷಕ್ಕೆ ಏರಿಸಲಾಗಿತ್ತು. 2023ರಲ್ಲಿ ತೆರಿಗೆ ರಿಯಾಯಿತಿಯ ಸ್ಪ್ಯಾಬ್ ಅನ್ನು ₹7 ಲಕ್ಷಕ್ಕೆ ಏರಿಕೆ ಮಾಡಿತ್ತು.







ಮದ್ಯಮ ವರ್ಗಕ್ಕೆ ಬಂಪರ್ ಕೊಡುಗೆ!

ಇದೀಗ ₹12 ಲಕ್ಷದವರೆಗೆ ವಾರ್ಷಿಕ ಆದಾಯವಿರುವವರು ತೆರಿಗೆ ಪಾವತಿಸಬೇಕಾಗಿಲ್ಲ. ಇದರೊಂದಿಗೆ ₹75,000 ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗುವುದರಿಂದ, ಒಟ್ಟಾರೆಯಾಗಿ ವಾರ್ಷಿಕ ₹12,75,000 ಆದಾಯವಿರುವವರು ತೆರಿಗೆ ಹೊರೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದರು.








ಹಿರಿಯ ನಾಗರಿಕರಿಗೆ ಬಂಪರ್!

ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಆದಾಯದಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಿತಿಯನ್ನು 1 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಅಂದರೆ, ಠೇವಣಿಗಳಿಂದ ವರ್ಷಕ್ಕೆ ಸಿಗುವ 1 ಲಕ್ಷ ರೂವರೆಗಿನ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ವಿನಾಯಿತಿ ಸಿಗುತ್ತದೆ. ಬಾಡಿಗೆಗಳಿಂದ ಬರುವ ಆದಾಯಕ್ಕೆ ವಾರ್ಷಿಕ ಟಿಡಿಎಸ್ ಮಿತಿಯನ್ನು 2.4 ಲಕ್ಷ ರೂನಿಂದ 6 ಲಕ್ಷ ರೂಗೆ ಏರಿಸಲಾಗಿದೆ.







ಅನ್ನದಾತರಿಗೂ ಬಿಗ್‌ ರಿಲೀಫ್‌!

3 ಲಕ್ಷದವರೆಗೂ ಇದ್ದ ಕಿಸಾನ್‌ ಕ್ರೆಡಿಟ್ ಕಾರ್ಡ್ ಮಿತಿಯನ್ನು 5 ಲಕ್ಷದವರೆಗೂ ಹೆಚ್ಚಿಸಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್​ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಸಿಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.








ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು (ಕೆಸಿಸಿ) 7.7 ಕೋಟಿ ರೈತರು, ಮೀನುಗಾರರು ಮತ್ತು ಡೈರಿ ರೈತರಿಗೆ ಅಲ್ಪಾವಧಿಯ ಸಾಲಗಳನ್ನು ಸುಗಮಗೊಳಿಸುವುದನ್ನು ಮುಂದುವರಿಸುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಕೆಸಿಸಿ ಮೂಲಕ ಪಡೆಯುವ ಸಾಲದ ಸಾಲದ ಮಿತಿಯನ್ನು ₹ 3,000 ರಿಂದ ₹ 5,000 ಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.